- Advertisement -
- Advertisement -

ಧರ್ಮಸ್ಥಳ: ಅಮಲು ಪದಾರ್ಥ ಸೇವಿಸಿ ಬಂದ ವ್ಯಕ್ತಿಯೋರ್ವ ತನ್ನ ತಂದೆಗೆ ಬೈದು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಪುದುಬೆಟ್ಟು ಗ್ರಾಮದ ಸುಕುಮಾರ ಎಂಬವರು ದೂರು ನೀಡಿದ್ದು, ನನ್ನ ಮಗ ರಜೀಶ್ (40) ಎಂಬವನು ವಿಪರೀತ ಅಮಲು ಪದಾರ್ಥ ಸೇವಿಸಿಕೊಂಡು ಸಂಜೆ ಬಂದು ನನ್ನನ್ನು ನೀನು ಮನೆ ಬಿಟ್ಟು ಹೋಗಬೇಕು ಇಲ್ಲದಿದ್ದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಅವ್ಯಾಚ ಶಬ್ದಗಳಿಂದ ಬೈದು ಅಂಗಳದ ಬದಿಯಲ್ಲಿ ರಬ್ಬರ್ ಮರದ ದೊಣ್ಣೆಯಿಂದ ಎಡ ಕಾಲಿನ ತೊಡೆಗೆ ಹೊಡೆದಿದ್ದು, ಗಾಯಗೊಂಡ ಸುಕುಮಾರ ಅವರನ್ನು ನೆರೆಯ ಕಮಲದಾಸ್ ಹಾಗೂ ಸುಕುಮಾರ ಅವರ ಪತ್ನಿ ಅಲ್ಪಮ್ಮ ಆರೈಕೆ ಮಾಡಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -








