- Advertisement -
- Advertisement -




ಮಂಗಳೂರು: ಧರ್ಮಸ್ಥಳದಲ್ಲಿ ಯಾತ್ರಾರ್ಥಿ ವೃದ್ಧೆಗೆ ಪ್ರಜ್ಞೆ ತಪ್ಪುವ ಔಷಧಿ ನೀಡಿ ಚಿನ್ನಾಭರಣ ಕಳವುಗೈದಿರುವ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು ಬನ್ನೇರುಘಟ್ಟ ಮೂಲದ ಪ್ರೇಮಾ ಕೆ.(70) ಮೋಸ ಹೋದ ವೃದ್ಧೆ. ಮಹಿಳೆಯಿಂದ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
ಅಪರಿಚಿತರು ಪ್ರಸಾದ, ಜ್ಯೂಸ್ ನೀಡಿ ಪರಿಚಯ ಬೆಳೆಸಿ ಕೃತ್ಯ ಎಸಗಿದ್ದು, 112 ಗ್ರಾಂ ಚಿನ್ನಾಭರಣ, 7 ಸಾವಿರ ನಗದು ಕಳವು ಮಾಡಲಾಗಿದೆ. ದೇವಸ್ಥಾನದ ಮುಖ್ಯದ್ವಾರದ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ.
ಅಸ್ವಸ್ಥಗೊಂಡ ವೃದ್ಧೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ 307 ಅಡಿ ಪ್ರಕರಣ ದಾಖಲಾಗಿದೆ. ಯಾತ್ರಾರ್ಥಿಗಳು ಅಪರಿಚಿತರಿಂದ ಆಹಾರ, ಪಾನೀಯ ಸ್ವೀಕರಿಸದಂತೆ ಪೊಲೀಸ್ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.
- Advertisement -








