Sunday, June 7, 2026
spot_imgspot_img
spot_imgspot_img

ಧರ್ಮಸ್ಥಳ ಪ್ರಕರಣ; ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಇಂದು ಮಂಗಳೂರಿಗೆ – ಸಾಕ್ಷಿ ದೂರುದಾರನ ವಿಚಾರಣೆ..!

- Advertisement -
- Advertisement -

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಶವಗಳನ್ನು ಹೂತಿದ್ದೇನೆಂದು ಹೇಳಿರುವ ಸಾಕ್ಷಿ ದೂರುದಾರ ಜು.27ರಂದು ಮಂಗಳೂರಿನಲ್ಲಿ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿಯೆದುರು ಸಾಕ್ಷಿ ದೂರುದಾರ ಹಾಜರಾಗಲಿದ್ದಾರೆ.

ನಿನ್ನೆ (ಜು.26ರಂದು) ಎಸ್. ಐ. ಟಿ ಅಧಿಕಾರಿ ಡಿಐಜಿ ಎಂ.ಎನ್. ಅನುಚೇತ್ ಮುಂದೆ ಹಾಜರಾಗಿದ್ದು ನಿರಂತರ ಎಂಟು ಗಂಟೆಗಳ ಕಾಲ ತನ್ನ ಹೇಳಿಕೆಯನ್ನು ನೀಡಿದ್ದಾರೆ. ತನ್ನಲ್ಲಿರುವ ಪಿನ್ ಟು ಪಿನ್ ಮಾಹಿತಿಯನ್ನು ಎಸ್. ಐ. ಟಿ ಮುಂದೆ ನೀಡಿರುವ ಮುಸುಕುಧಾರಿ ಸಾಕ್ಷಿ ದೂರುದಾರ ಹೇಳಿಕೆ ನೀಡಿದ ನಂತರ ತನ್ನ ವಕೀಲರೊಂದಿಗೆ ನಿಗೂಢ ಸ್ಥಳಕ್ಕೆ ತೆರಳಿದ್ದರು. ಇಂದು ಮೊಹಾಂತಿಯವರು ಸಾಕ್ಷಿ ದೂರುದಾರನ ಹೇಳಿಕೆ ಕುರಿತಾದ ವಿಚಾರಣೆ ನಡೆಸುವ ಸಾಧ್ಯತೆ ಹೆಚ್ಚಿದೆ.

- Advertisement -

Related news

error: Content is protected !!