Friday, April 26, 2024
spot_imgspot_img
spot_imgspot_img

ಉಕ್ರೇನ್ -ರಷ್ಯಾ ಸಮರ: ಭಾರತದ ಹಲವು ವಿದ್ಯಾರ್ಥಿಗಳು ನಾಪತ್ತೆ, ಕುಟುಂಬಸ್ಥರಲ್ಲಿ ಹೆಚ್ಚಿದ ಆತಂಕ

- Advertisement -G L Acharya panikkar
- Advertisement -

ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಓದುತ್ತಿದ್ದ ಅನೇಕ ಭಾರತೀಯ ಸ್ನೇಹಿತರು ‘ಕಾಣೆಯಾಗಿದ್ದಾರೆ’ ಮತ್ತು ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಅಳಲು ತೊಡಿಕೊಳ್ಳುತ್ತಿದ್ದಾರೆ. ಇದಲ್ಲದೆ ಅಲ್ಲಿ ಎಂಬಿಬಿಎಸ್ ಓದಲು ಹೋಗಿರುವ ಮಕ್ಕಳ ಅನೇಕ ಕುಟುಂಬಸ್ಥರು ಸಂಪರ್ಕ ಕಡಿದುಕೊಂಡು ಚಿಂತಾಕ್ರಾಂತರಾಗಿದ್ದಾರೆ.

ಡೊನೆಸ್ಟ್ಕ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಆಶಿತಾ ಭಾರದ್ವಾಜ್ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರ ಸಹೋದರಿ ಪ್ರಕಾರ, ಆಶಿತಾ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಆಕೆಯೂ ಕುಟುಂಬಸ್ಥರನ್ನು ಸಂಪರ್ಕಿಸುತ್ತಿಲ್ಲ. ಅವಳು ಪೋಲೆಂಡ್ ಗಡಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಳು ಆದರೆ ನಮಗೆ ಅವಳನ್ನು ಸಂಪರ್ಕಿಸಲು, ಪತ್ತೆಹಚ್ಚಲು ಸಾಧ್ಯವಾಗಲಿಲ್ಲ” ಎಂದು ನೊಂದು ನುಡಿದಿದ್ದಾರೆ.

ಉಕ್ರೇನ್‌ – ರಷ್ಯಾ ಕದನ ಶೆಲ್ ದಾಳಿಗೆ ಕರ್ನಾಟಕದ ವಿದ್ಯಾರ್ಥಿ ಬಲಿ

ಉಕ್ರೇನ್​​ ಬಿಕ್ಕಟ್ಟು; 27 ರಾಷ್ಟ್ರಗಳಿಗೆ ರಷ್ಯಾ ವಾಯು ಪ್ರದೇಶ ಬಂದ್​..!

ಹರ್ಯಾಣದ ಎಂಬಿಬಿಎಸ್ ವಿದ್ಯಾರ್ಥಿ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದು ಅವರ ಫೋನ್ ಕೂಡ ಸಿಗುತ್ತಿಲ್ಲ. ಅವರನ್ನು ನಿರಂತರವಾಗಿ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಖಾರ್ವಿಕ್ ನಲ್ಲಿರುವ ಸಾಹಿಲ್ ಹೇಳುತ್ತಾರೆ. ವಿನ್ನಿಟ್ಸಿಯಾ ನ್ಯಾಷನಲ್ ಪಿರೋಗೊವ್ ವೈದ್ಯಕೀಯ ವಿಶ್ವವಿದ್ಯಾಲಯದ ಮತ್ತೊಬ್ಬ ವಿದ್ಯಾರ್ಥಿ ಕೂಡ ಪತ್ತೆಯಾಗಿಲ್ಲ. “ನಾವು ಅವನ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದೇವೆ ಅವರು ಎಲ್ಲಿದ್ದಾರೆಂದು ಕೇಳುತ್ತಿದ್ದೇವೆ” ಎಂದು ಅದೇ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಅವನ ಸ್ನೇಹಿತ ಹೇಳಿದರು. ಪೋಲೆಂಡ್ ಗಡಿಯ ಕಡೆಗೆ ಹೋಗುತ್ತಿದ್ದರು ಮತ್ತು ನಂತರ ಟ್ರ್ಯಾಕ್ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳುತ್ತಾರೆ.

ಭಾರತಕ್ಕೆ ಹಿಂತಿರುಗಲು ಪೋಲೆಂಡ್ ಗಡಿಭಾಗದಲ್ಲಿ ಕಾಯುತ್ತಿರುವ ಸಂದೀಪ್ ಕೌರ್, ಉಕ್ರೇನ್-ಪೋಲೆಂಡ್ ಗಡಿಭಾಗಕ್ಕೆ ಹೋಗಿರುವ ಹಲವು ವಿದ್ಯಾರ್ಥಿಗಳ ಫೋನ್ ಗಳು ಸಂಪರ್ಕ ಕಳೆದುಕೊಂಡಿದ್ದು ಈ ವಿದ್ಯಾರ್ಥಿಗಳ ಫೋನ್ ಗಳನ್ನು ಅಲ್ಲಿನ ಭದ್ರತಾ ಸಿಬ್ಬಂದಿ ತೆಗೆದಿಟ್ಟುಕೊಂಡಿದ್ದಾರೆ ಎಂದು ಆರೋಪಿಸುತ್ತಾರೆ.

ಉಕ್ರೇನ್​​ನಿಂದ ಸಾವಿರಾರು ಜನರನ್ನು ಮರಳಿ ಕರೆತರಲು ಕೇಂದ್ರ ಹಗಲಿರುಳು ಶ್ರಮಿಸುತ್ತಿದೆ; ಪ್ರಧಾನಿ ಮೋದಿ

- Advertisement -

Related news

error: Content is protected !!