Friday, June 19, 2026
spot_imgspot_img
spot_imgspot_img

ಧರ್ಮಸ್ಥಳ: ನೂರಾರೂ ಶವ ಹೂತಿಟ್ಟ ಪ್ರಕರಣ; 7 ಮತ್ತು 8ನೇ ಪಾಯಿಂಟ್‌ನಲ್ಲಿ ಪತ್ತೆಯಾಗದ ಕಳೇಬರ..!

- Advertisement -
- Advertisement -

ಬೆಳ್ತಂಗಡಿ: ನೂರಾರೂ ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮತ್ತು 8ನೇ ಪಾಯಿಂಟ್‌ನಲ್ಲಿ ಯಾವುದೇ ಕಳೇಬರಗಳು ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಆಗಸ್ಟ್ 1 ರಂದು ನದಿ ಬದಿಯಲ್ಲಿಯೇ ಇದ್ದ ಏಳನೇ ಸ್ಥಳದಲ್ಲಿ ಶುಕ್ರವಾರ ಬೆಳಗ್ಗೆ ಎಸ್.ಐ.ಟಿ ತಂಡ ಕಾರ್ಮಿಕರನ್ನು ಉಪಯೋಗಿಸಿ ಅಗೆಯುವ ಕಾರ್ಯ ಆರಂಭಿಸಿದ್ದು, ಅಗತ್ಯ ಬಂದರೆ ಉಪಯೋಗಿಸಲು ಹಿಟಾಚಿಯನ್ನು ಇಟ್ಟುಕೊಂಡಿದ್ದಾರೆ. ಆದರೆ ಅಗೆಯುವ ಸಂದರ್ಭದಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಮಧ್ಯಾಹ್ನ 2 ಗಂಟೆಯಿಂದ 4:30 ರ ವರೆಗೆ ನೇತ್ರಾವತಿ ಅರಣ್ಯ ಪ್ರದೇಶಕ್ಕೆ ಎಸ್.ಐ.ಟಿ ಅಧಿಕಾರಿಗಳು ದೂರುದಾರನನ್ನು ಕರೆದುಕೊಂಡು ಬಂದು ಪೌರಕಾರ್ಮಿಕರಿಂದ ಮತ್ತು ಮಿನಿ ಜೆಸಿಬಿಯಿಂದ 8 ನೇ ಗುರುತು ಮಾಡಿದ ಜಾಗದಲ್ಲಿ ಕಾರ್ಯಾಚರಣೆ ನಡೆಸಿದ್ರೂ ಯಾವುದೇ ಕಳೇಬರ ಸಿಕ್ಕಿಲ್ಲ ಎಂಬ ಮಾಹಿತಿ ಲಭಿಸಿದೆ.

ಇಂದಿನ ಕಾರ್ಯಾಚರಣೆ ಅಂತ್ಯವಾಗಿದ್ದು, ಇನ್ನೂ ನಾಳೆ 9 ನೇ ಗುರುತು ಮಾಡಿದ ಸ್ಥಳದಿಂದ ಕಾರ್ಯಾಚರಣೆ ಮುಂದುವರಿಸುತ್ತಾರೆ.

- Advertisement -

Related news

error: Content is protected !!