



ಧರ್ಮಸ್ಥಳ ವಿಚಾರದಲ್ಲಿ ಜನಾರ್ದನ ಪೂಜಾರಿ ಹೇಳಿಕೆ ವಿರುದ್ದ ಮಹಮ್ಮದ್ ಆಲಿ ಕಿಡಿ ಕಾರಿದ್ದಾರೆ. ಧರ್ಮಸ್ಥಳದ ಪರವಾಗಿ ಮಾತನಾಡುವಾಗ ಮುಸಲ್ಮಾನರ ಮತ್ತು ಕ್ರೈಸ್ತ ಧರ್ಮದ ದಫನ ಭೂಮಿಯ ಬಗ್ಗೆ ಮತನಾಡಿದ್ದಾರೆ. ಮಸೀದಿಯಲ್ಲಿ ಹೂಳಿಲ್ವ? ಚರ್ಚ್‌ನಲ್ಲಿ ಹೂಳಿಲ್ವ? ಎಂಬ ಮಾತನ್ನು ಹೇಳಿದ್ದಾರೆ. ಇದು ಕಾಂಗ್ರೇಸ್‌ಗೆ ತುಂಬಾ ಮುಜುಗರ ತರುವಂತ ವಿಚಾರ , ಮತ್ತು ಮುಸಲ್ಮಾನ ಸಮುದಾಯಕ್ಕೆ ನೋವು ತರುವಂತ ವಿಚಾರ ಈ ಹೇಳಿಕೆ ಖಂಡನೀಯ ಎಂದು ಮಹಮ್ಮದ್ ಆಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮಸೀದಿಯ ಪಕ್ಕದಲ್ಲಿ ದಫನ ಭೂಮಿಯ ಇದೆ, ಚರ್ಚ್‌ನ ಪಕ್ಕ ದಫನ ಭೂಮಿಗಳಿವೆ. ಅಧಿಕೃತ ದಫನ ಭೂಮಿಯಲ್ಲಿ ಯಾರು ಮರಣ ಹೊಂದಿದ್ದಾರೆ ಅವರ ಸಂಸ್ಕಾರವನ್ನು ಗೌರಯುತವಾಗಿ ಮಾಡಿ ಅಲ್ಲಿ ಹೂಳುವುದು ಇದು ಹಿಂದಿನ ಪದ್ದತಿ. ಯಾರು ದಫನಗೊಂಡಿದ್ದಾರೆ ಅವರ ಎಲ್ಲಾ ದಾಖಲೆಗಳು ಮುಸಲ್ಮಾನರ ಮಸೀದಿಯಲ್ಲಿ ಹಾಗೂ ಕ್ರೈಸ್ತರ ಚರ್ಚ್‌ಗಳಲ್ಲಿ ದಾಖಲೆಗಳು ಇರುತ್ತದೆ. ಆದರೆ ಧರ್ಮಸ್ಥಳ ಪ್ರಕರಣಕ್ಕೂ ಮಸೀದಿಗೆ ಮತ್ತು ಚರ್ಚ್‌ನ ವಿಚಾರವನ್ನು ಯಾಕೆ ತರಬೇಕಿತ್ತು ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.








