- Advertisement -
- Advertisement -
ಭಾರತ ಕಂಡಂತ ಚಾಣಾಕ್ಷ ನಾಯಕ, ಹೆಲಿಕಾಪ್ಟರ್ ಹಿಟ್ ಮಾಸ್ಟರ್, ಅತ್ಯುತ್ತಮ ವಿಕೆಟ್ ಕೀಪರ್ಬ್ಯಾಟ್ಸ್ಮನ್ ಎನಿಸಿರುವ ಮಹೇಂದ್ರ ಸಿಂಗ್ ಧೋನಿಗೆ ಮಂಗಳವಾರ 39ನೇ ಜನ್ಮದಿನದ ಸಂಭ್ರಮ.ಭಾರತಕ್ಕೆ ಐಸಿಸಿಯ ಎಲ್ಲಾ ಮೂರು ಪ್ರಮುಖ ಟ್ರೋಫಿಗಳನ್ನು ಗೆದ್ದುಕೊಟ್ಟ ಏಕೈಕ ನಾಯಕ.ಚಿರತೆಯಂತೆ ವೇಗ, ಚೆಂಡನ್ನು ಆಗಸದೆತ್ತರಕ್ಕೆ ಬಾರಿಸುವ ತಾಕತ್ತು, ವಿಕೆಟ್ ಹಿಂದೆ ನಿಂತರಂತೂ ಮಿಂಚಿಗಿಂತಲೂ ವೇಗ ಈತನ ಕೈಚಳಕ!.
ಎಂ.ಎಸ್ ಧೋನಿಯ 39ನೇ ಜನುಮ ದಿನಕ್ಕೆ ಅನೇಕ ದಿಗ್ಗಜರು ಶುಭಹಾರೈಸಿದ್ದಾರೆ. “ಹುಟ್ಟುಹಬ್ಬದ ಶುಭಾಶಯಗಳು ಮಾಹಿ ಭಾಯ್, ಆರೋಗ್ಯ ಹಾಗೂ ಸಂತೋಷ ನಿಮಗೆ ಸದಾ ಇರಲಿ, ದೇವರು ಒಳ್ಳೆಯದು ಮಾಡಲಿ,” ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕನಿಗೆ ಶುಭ ಹಾರೈಸಿದ್ದಾರೆ.2011ರಲ್ಲಿ ತವರು ನೆಲದಲ್ಲಿ ಏಕದಿನ ವಿಶ್ವಕಪ್, 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು, ಐಸಿಸಿಯ ಮೂರು ಪ್ರಮುಖ ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಎಂಬ ಖ್ಯಾತಿ ಪಡೆದರು.
- Advertisement -