Friday, June 19, 2026
spot_imgspot_img
spot_imgspot_img

ಉಪ್ಪಿನಂಗಡಿ: ಮಖೆ ಜಾತ್ರೆಯಲ್ಲಿ ವ್ಯಾಪಾರಿಗೆ ಅನ್ಯ ಕೋಮಿನ ಯುವಕರಿಂದ ಹಲ್ಲೆ

- Advertisement -
- Advertisement -

ಉಪ್ಪಿನಂಗಡಿ: ಮಖೆ ಜಾತ್ರೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ಯುವಕನಿಗೆ ನಾಲ್ವರು ಹಿಂದೂ ಯುವಕರ ತಂಡ ಮಾರಣಾಂತಿವಾಗಿ ಹಲ್ಲೆ ನಡೆಸಿ, ವಾಹನವನ್ನು ಹಾನಿಗೊಳಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಇಳಂತಿಲ ನಿವಾಸಿ ಅಬ್ದುಲ್ ಹಾರೀಸ್ ಹಲ್ಲೆಗೊಳಗಾದವರು. ಹಾರೀಸ್ ಅವರು ಉಪ್ಪಿನಂಗಡಿಯಲ್ಲಿ ನಡೆದ ಮಖೆ ಜಾತ್ರೆಯಲ್ಲಿ ತನ್ನ ಆಪೆ ರಿಕ್ಷಾದಲ್ಲಿ ಐಸ್ ಕ್ರೀಂ ಮಾರಾಟ ಮಾಡುತ್ತಿದ್ದರು.

ಈ ವೇಳೆ ಅಲ್ಲಿಗೆ ಬಂದ ನಾಲ್ವರು ಹಿಂದೂ ಯುವಕರು ಮತ್ತು ಇತರರ ತಂಡ ನಮ್ಮ ಜಾತ್ರೆಯಲ್ಲಿ ನೀನು ಏಕೆ ವ್ಯಾಪಾರ ಮಾಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ವಾಹನದಿಂದ ಎಳೆದು ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ವಾಹನದ ಗಾಜು ಅನ್ನು ಪುಡಿಗಟ್ಟಿದ್ದಾರೆ ಎಂದು ಹಾರೀಸ್ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ರವಿನಂದನ್ ನಟ್ಟಿಬೈಲು, ಮಹೇಶ ಬಜತ್ತೂರು, ಹರ್ಷಿತ್ ಕುಮಾರ್ (ಡ್ರೈವಿಂಗ್ ಸ್ಕೂಲ್), ಧನ್ ರಾಜ್ ಯಾನೆ ಧನು ನಟ್ಟಿಬೈಲು ಸೇರಿದಂತೆ ಇತರರ ವಿರುದ್ಧ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!