



ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ.
ಮೊನ್ನೆಯಷ್ಟೇ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನೆರೆವೇರಿತ್ತು. ಈ ಕುರಿತ ವಿಡಿಯೋವೊಂದನ್ನ ನಟ ಶೇರ್ ಮಾಡಿದ್ದರು. ಪತ್ನಿ ಪ್ರೇರಣಾ ಸೀಮಂತ ಸಂಭ್ರಮ ವಿಡಿಯೋವನ್ನ ನಟ ಹಂಚಿಕೊಂಡಿದ್ದು, ಹಸಿರು ಬಣ್ಣದ ಸೀರೆಯಲ್ಲಿ ಪ್ರೇರಣಾ ಕಂಗೊಳಿಸಿದ್ದರು. ಲೈಟ್ ಬಣ್ಣದ ಉಡುಗೆಯಲ್ಲಿ ಧ್ರುವ ಕಾಣಿಸಿಕೊಂಡಿದ್ದರು. ಕನಕಪುರ ರಸ್ತೆಯ ಫಾರ್ಮ್ ಹೌಸ್‌ನಲ್ಲಿ ಪ್ರೇರಣಾ ಸೀಮಂತ ಶಾಸ್ತ್ರ ಅದ್ದೂರಿಯಾಗಿ ನಡೆಯಿತು.
ಮನೆಗೆ ಕಳೆದ ವರ್ಷ ಮುದ್ದು ಮಗಳ ಆಗಮನವಾಗಿದೆ. 2ನೇ ಮಗುವಿನ ನಿರೀಕ್ಷೆಯಲ್ಲಿದ್ದ ಧ್ರುವ ಸರ್ಜಾ ದಂಪತಿಗಳಿಗೆ ಹಬ್ಬದ ದಿನವೇ ಲಿಟ್ಲ್ ಸ್ಟಾರ್ ನ ಆಗಮನವಾಗಿದೆ. ಸೀಮಂತ ಶಾಸ್ತ್ರ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಆಪ್ತರು, ಅಭಿಮಾನಿಗಳು ವಿಶ್ ಮಾಡಿದ್ದಾರೆ. ಆಗಸ್ಟ್ 25ರಂದು ವಿಶೇಷ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಧ್ರುವ ಸರ್ಜಾ 2ನೇ ಮಗುವಿನ ಬಗ್ಗೆ ಗುಡ್ ನ್ಯೂಸ್ ಹೇಳಿದ್ದರು.