Thursday, March 28, 2024
spot_imgspot_img
spot_imgspot_img

ನಾನು ಡ್ರಗ್ ಮಾಡಿದ್ದೇನೆ. ನನ್ನ ಜೀವನದಲ್ಲಿ ನಡೆದ ಆ ಒಂದು ಘಟನೆಯೇ ಇದಕ್ಕೆ ಕಾರಣ-ದಿಗಂತ್

- Advertisement -G L Acharya panikkar
- Advertisement -

ದಿಗಂತ್ ಹಾಗು ಐಂದ್ರಿತಾ ದಂಪತಿಗಳಿಗೆ ಸಿಸಿಬಿ ಇಂದ ನೋಟೀಸ್ ಬಂದಿತ್ತು. ಇದೇ ಕಾರಣಕ್ಕೆ ದಿಗಂತ್ ಹಾಗು ಐಂದ್ರಿತಾ ರೇ ಅವರು ಕೇರಳದಿಂದ ನೇರವಾಗಿ ಸಿಸಿಬಿ ಕಚೇರಿಗೆ ಬಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ ಸುಮಾರು 4 ಘಂಟೆಗಳ ಕಾಲದ ನಡೆದ ಈ ವಿಚಾರಣೆ ಯಲ್ಲಿ ದಿಗಂತ್ ಅವರು ಸತ್ಯ ಬಾಯಿ ಬಿಟ್ಟಿದ್ದಾರೆ ದಿಗಂತ್ ಅವರು “ಹೌದು ನಾನು ಡ್ರಗ್ ಸೇವನೆ ಮಾಡುತ್ತೇನೆ, ನನ್ನ ಜೀವನದಲ್ಲಿ ನಡೆದ ಆ ಒಂದು ಘಟನೆಯಿಂದ ಇವತ್ತು ನನಗೆ ಹೆಚ್ಚು ಸಿನಿಮಾಗಳಿಲ್ಲ” ಎಂದು ಕಣ್ಣೀರಿಟ್ಟು ದಿಗಂತ್ ಅವರು ಹೇಳಿದ್ದಾರೆ.

ನಮ್ಮ ದಿಗಂತ್ ಅವರು ಮೂಲತಃ ತೀರ್ಥಹಳ್ಳಿ ಯವರು, ವಿದ್ಯಾಭ್ಯಾಸ ಮುಗಿಸಿ ಮಾಡೆಲ್ಲಿಂಗ್ ಕ್ಷೇತ್ರಕ್ಕೆ ಬಂದು ನಂತರ ಕನ್ನಡ ಸಿನಿಮಾಗಳಲ್ಲಿ ಕಾಣಿಸಿ ಕೊಳ್ಳಲು ಶುರು ಮಾಡುತ್ತಾರೆ. ದಿಗಂತ್ ಅವರ ಮೊದಲ ಕನ್ನಡ ಚಿತ್ರ ಮಿಸ್ ಕಲಿಫೊರ್ನಿಯಾ ಅಲ್ಲಿಂದ ಇಲ್ಲಿಯ ತನಕ ದಿಗಂತ್ ಅವರು ಸುಮಾರು 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡ ಸೇರಿ ಹಿಂದಿ ಸಿನೆಮಾಗಳಲ್ಲಿ ಕೂಡ ನಟನೆ ಮಾಡಿದ್ದಾರೆ. ಕಳೆದ ವರ್ಷ ದಿಗಂತ್ ಅವರು “ಟಿಕೆಟ್ ಟು ಬಾಲಿವುಡ್” ಎಂಬ ಹಿಂದಿ ಚಿತ್ರದಲ್ಲಿ ನಟನೆ ಮಾಡಿದರು. ಈ ಚಿತ್ರದ ಚಿತ್ರೀಕರಣ ವೇಳೆ ಹೀರೋಯಿನ್ ಅವರು ಒಂದು ಸೀನ್ ಗಾಗಿ ಎಸೆದ ಚಾಕು ಸೀದಾ ದಿಗಂತ್ ಅವರ ಬಲ ಕಣ್ಣನ್ನು ಸೀಳಿಕೊಂಡು ಬಂದಿದೆ ದಿಗಂತ್ ಅವರ ಬಲ ಕಣ್ಣಿನ ದೃಷ್ಟಿ ಕೋನ ಸುಮಾರು 90 ರಷ್ಟು ಹೋಗಿದೆ ಎನ್ನಲಾಗಿದೆ ಇದು ನಿಜಕ್ಕೂ ದುಃಖದ ಸಂಗತಿ.

ಆ ನಂತರ ಕೂಡ ದಿಗಂತ್ ಅವರು ಕೆಲವು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡರಾದರೂ ಅವಕಾಶಗಳೇ ಕಡಿಮೆ ಆಗುತ್ತಾ ಹೋಯಿತು ಇದೇ ಕಾರಣಕ್ಕೆ ಖಿನ್ನತೆಗೆ ಜಾರಿದ ದಿಗಂತ್ ಅವರು ಡ್ರಗ್ ಸೇವನೆ ಮಾಡಲು ಶುರು ಮಾಡಿದರು ಎಂದು ನೆನ್ನೆ ಸಿಸಿಬಿ ವಿಚಾರಣೆ ವೇಳೆ ದಿಗಂತ್ ಅವರು ಬಿಕ್ಕಿ ಬಿಕ್ಕಿ ಅಳುತ್ತಾ ಈ ಮಾತುಗಳನ್ನು ಹೇಳಿದ್ದಾರೆ ದಿಗಂತ್ ಅವರ ಜೀವನದ ಈ ಕಹಿ ಸತ್ಯ ಅರಿತರೆ ನಿಜಕ್ಕೂ ಕಣ್ಣೀರು ಬರುತ್ತೆ
ದಿಗಂತ್ ಅವರ ಈ ಕಥೆ ಕೇಳಿ ಪೊಲೀಸರು ಕೂಡ ವಿಚಾರಣೆ ವೇಳೆ ಭಾವುಕರಾಗಿದ್ದರಂತೆ. ದಿಗಂತ್ ಅವರು ಸಾಕಷ್ಟು ವೈದ್ಯರ ಬಳಿ ಇದನ್ನು ತೋರಿಸಿದಾಗ ವೈದ್ಯರು ಕೂಡ ಇದನ್ನು ಸರಿ ಮಾಡುವುದು ದೂರದ ಮಾತು ಎಂದು ಹೇಳಿದ್ದಾರಂತೆ.

- Advertisement -

Related news

error: Content is protected !!