Tuesday, April 20, 2021
spot_imgspot_img
spot_imgspot_img

ನಿರ್ದೇಶಕ ರಾಜೀಂದ್ರ ಸಿಂಗ್ ಬಾಬುರವರಿಗೆ ಮಾತೃ ವಿಯೋಗ!

ಬೆಂಗಳೂರು: ಹಿರಿಯ ನಟಿ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ತಾಯಿ ಪ್ರತಿಮಾ ದೇವಿ(88) ಅವರು ಇಂದು ಮಧ್ಯಾಹ್ನ ವಯೋಸಹಜ ಕಾಯಿಲೆಯಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಪ್ರತಿಮಾ ದೇವಿ ಅವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ರಾಜ್​ ಕುಮಾರ್, ವಿಷ್ಣುವರ್ಧನ್​ರ ಸಿನಿಮಾಗಳಲ್ಲೂ ನಟಿಸುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಹೆಚ್ಚಾಗಿ ತಾಯಿ ಪಾತ್ರಗಳಲ್ಲಿ ಪ್ರತಿಮಾ ದೇವಿ ನಟಿಸುತ್ತಿದ್ದರು. 1947 ರಲ್ಲಿ ಕೃಷ್ಣ ಲೀಲಾ ಸಿನಿಮಾ ಮೂಲಕ ಅಭಿನಯಕ್ಕೆ ಕಾಲಿಟ್ಟಿದ್ದ ಪ್ರತಿಮಾ ದೇವಿಯವರು ನಾಗಕನ್ಯೆ, ಜಗನ್ಮೋಹಿನಿ, ಶ್ರೀನಿವಾಸ ಕಲ್ಯಾಣ, ಧರ್ಮಸ್ಥಳ ಮಹಾತ್ಮೆ, ಧರಣಿ ಮಂಡಲ ಮಧ್ಯದೊಳಗೆ, ರಾಮಾ ಶಾಮಾ ಭಾಮಾ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ರು. ಸುಮಾರು ಅರವತ್ತೈದು ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಪ್ರತಿಮಾ ದೇವಿಯವರದ್ದು.

- Advertisement -

MOST POPULAR

HOT NEWS

Related news

error: Content is protected !!