


ಅಳಿಕೆ ಗ್ರಾಮದ ಎರುಂಬು ಶ್ರೀ ವಿಷ್ಣುಮಂಗಲ ದೇವಸ್ಥಾನದಲ್ಲಿ ಸುಮಾರು 35 ವರ್ಷಗಳ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗೆಗಳ ಮೂಲಕ ಗುರುತಿಸಲ್ಪಟ್ಟ ದಿವ್ಯಜ್ಯೋತಿ ಮಿತ್ರ ವೃಂದದ ವಾರ್ಷಿಕೋತ್ಸವವು ವಿಜೃಂಭಣೆಯಿಂದ ನಡೆಯಿತು.

ಮಿತ್ರವೃಂದದ ಸಹಸಂಸ್ಥೆ ದಿವ್ಯಜ್ಯೋತಿ ಯಕ್ಷವೃಂದದ ವಿದ್ಯಾರ್ಥಿಗಳ ರಂಗಪ್ರವೇಶವು ನಾಟ್ಯಗುರುಗಳಾದ ಶಿವಾನಂದ ಶೆಟ್ಟಿ ಪೆರ್ಲ ರವರ ನಿರ್ದೇಶನದಲ್ಲಿ ನಡೆದು ಯಕ್ಷಗಾನದ ಪೂರ್ವರಂಗ ಮತ್ತು “ಕೃಷ್ಣಲೀಲೆ – ಕಂಸವದೆ” ಎಂಬ ಪ್ರಸಂಗದೊಂದಿಗೆ ಪ್ರದರ್ಶನಗೊಂಡಿತು. ಸುಮಾರು 32 ವಿದ್ಯಾರ್ಥಿಗಳು ಈ ರಂಗಪ್ರವೇಶದಲ್ಲಿ ಗೆಜ್ಜೆ ಕಟ್ಟಿ ಯಕ್ಷ ಪ್ರಪಂಚಕ್ಕೆ ಪಾದಾರ್ಪಣೆಗೈದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ಕೃಷಿಕ ಮತ್ತು ಕಲಾಬಂಧು ಗುಬ್ಯ ಶ್ರೀಧರ ಶೆಟ್ಟಿ ದಿವ್ಯಜ್ಯೋತಿ ಮಿತ್ರವೃಂದದ ನಿರಂತರ ಸಾಮಾಜಿಕ ಕಾರ್ಯವೈಖರಿಯ ಪ್ರಶಂಸನೀಯ ಮಾತುಗಳನ್ನಾಡಿದರು. ಯಕ್ಷ ನಾಟ್ಯ ಗುರು ಶಿವಾನಂದ ಶೆಟ್ಟಿ ಪೆರ್ಲರವರ ಯಕ್ಷ ಸಾಧನೆಗಾಗಿ ಗೌರವಿಸಲಾಯಿತು. ದೈವಪಾತ್ರಿ ಶಿವಪ್ಪ ಮೂಲ್ಯ ಮೆಣಸಿನಗಂಡಿರವರನ್ನು “ಸೇವಾಭಿನಂದನಾ” ಸನ್ಮಾನದೊಂದಿಗೆ ಗೌರವಿಸಲಾಯಿತು. ವ್ಯಸನ ಮುಕ್ತರಾಗಿ ಊರಿನ ಸಾಧಕರಾದ ಆನಂದ ಎ ರವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂತೋಷ್ ಶೆಟ್ಟಿ ಪೆಲ್ತಡ್ಕ, ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ, ನಿಟಿಲಾಕ್ಷ ಶೆಟ್ಟಿ ಮುಳಿಯ, ಜಗಜೀವನರಾಮ್ ಮೈರ, ಲಕ್ಷ್ಮೀಶ ಕಡಮಣ್ಣಾಯ, ವಿಶ್ವನಾಥ ಭಟ್ ಕಾನ , ಪ್ರಕಾಶ್ ರೈ ಕಲ್ಲಂಗಳ ಉಪಸ್ಥಿತರಿದ್ದರು ಗೌರವಾಧ್ಯಕ್ಷ ಮೊಹನದಾಸ್ ರೈ ಎರುಂಬು ಪ್ರಸ್ತಾವಿಸಿ ಸ್ವಾಗತಿಸಿದರು. ಅಧ್ಯಕ್ಷ ರಾಧಾಕೃಷ್ಣ ವಂದನಾರ್ಪಣೆಗೈದರು. ಶ್ರೀಮತಿ ರೂಪ ಚಂದ್ರಹಾಸ ಕುಲಾಲ್ ದಂಪತಿಗಳ ಸಹಕಾರದೊಂದಿಗೆ ಅನ್ನಸಂತರ್ಪಣಾ ಸೇವೆ ನಡೆಯಿತು.
ಬಳಿಕ ಸುಜ್ಞಾನ ಮಹಿಳಾ ಮಂಡಳಿಯವರಿಂದ ವಿನೂತನ ಶೈಲಿಯ”ಸಾಂಸ್ಕೃತಿಕ ವೈಭವ” ಕಾರ್ಯಕ್ರಮವು ನಡೆಯಿತು. ನೂತನವಾಗಿ ಸಂಯೋಜನೆಗೊಂಡ ನಾಟಕ ತಂಡ “ದಿವ್ಯಜ್ಯೋತಿ ಕಲಾವಿದರಿಂದ ದಿನಕರ ಭಂಡಾರಿ ಕಣಂಜಾರು ವಿರಚಿತ ಮೋಹನದಾಸ್ ರೈ ಎರುಂಬು ನಿರ್ದೇಶನದ ಸಾಮಾಜಿಕ ಸಾಂಸಾರಿಕ, ಹಾಸ್ಯಮಯ ನಾಟಕ “ಮದಿಮೆದ ಇಲ್ಲಡ್ ” ಬಹುಜನರ ಮೆಚ್ಚುಗೆಗೆ ಪಾತ್ರವಾಯಿತು.