ಮಂಗಳೂರು: ದ.ಕ. ಜಿಲ್ಲೆಯಲ್ಲಿ ಜೂನ್ 23ರಿಂದ ಜಾರಿಗೆ ಬರುವಂತೆ ಹೊಸ ಮಾರ್ಗಸೂಚಿ ಜಾರಿಗೆ ಬರಲಿದ್ದು, ಜಿಲ್ಲಾಡಳಿತ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಖಾಸಗಿ ಬಸ್ ಗಳನ್ನು ಜೂನ್ 30ರವರೆಗೆ ರಸ್ತೆಗಿಳಿಸುವುದಿಲ್ಲ ಎಂದು ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಸ್ಪಷ್ಟನೆ ನೀಡಿದ್ದಾರೆ.

ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷರು ನೀಡಿರುವ ಸ್ಪಷ್ಟನೆ ಏನು?
ಜೂನ್ 30ರವರೆಗೆ ಖಾಸಗಿ ಬಸ್ ಓಡಿಸಲ್ಲ – ಬಸ್ ಮಾಲಕರ ಸಂಘದ ನಿರ್ಧಾರ.
ಜಿಲ್ಲಾಡಳಿತ ಬಸ್ ಓಡಿಸಲು ಅನುಮತಿ ನೀಡಿದೆ ಆದರೆ ನಾವು ನಾಳೆಯಿಂದ ಬಸ್ ಓಡಿಸೋದಿಲ್ಲಜೂನ್ ತಿಂಗಳ ಕೊನೆ ತನಕ ಖಾಸಗಿ ಬಸ್ ಓಡಿಸಲ್ಲ.
ಈ ತಿಂಗಳಲ್ಲಿ ನಾಳೆಯಿಂದ 7 ದಿನ ಬಸ್ ಓಡಿಸಲು 1 ತಿಂಗಳ ಟ್ಯಾಕ್ಸ್ ಕಟ್ಟಬೇಕು ಇದು ಕಷ್ಟ ಸಾಧ್ಯ.
ಈಗಿನ ಡೀಸೆಲ್ ರೇಟ್‌ನಲ್ಲಿ ಶೇ.50 ಪ್ರಯಾಣಿಕರನ್ನು ತುಂಬಿಸಬೇಕು.
ನಗರದಾದ್ಯಂತ ಕಾಮಗಾರಿಗಾಗಿ ರಸ್ತೆ ಅಗೆದು ಹಾಕಿದ್ದಾರೆ.
2 ತಿಂಗಳಿನಿಂದ ನಿಂತಿದ್ದ ಬಸ್‌ಗಳನ್ನು ಗ್ಯಾರೇಜ್‌ಗೆ ತೆಗೆದುಕೊಂಡು ಹೋಗಿ ರಿಪೇರಿ ಮಾಡಬೇಕು.

ಈ ಎಲ್ಲಾ ಕಾರಣಗಳಿಂದ ಜೂನ್ ತಿಂಗಳ ಕೊನೆ ತನಕ ಬಸ್ ಓಡಿಸೋದಿಲ್ಲ ಎಂದು ದಿಲ್‌ರಾಜ್ ಆಳ್ವ ಸ್ಪಷ್ಟನೆ ನೀಡಿದ್ದಾರೆ.










