- Advertisement -
- Advertisement -
ಮಂಗಳೂರು :-ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಲಾಕ್ ಹಿನ್ನೆಲೆಯಲ್ಲಿ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ8 ಗಂಟೆಯಿಂದ 11 ಗಂಟೆಯವರೆಗೆ ಅವಕಾಶವಿತ್ತು.ಆದರೆ ಮಾರ್ಕೆಟ್ ಗಳತ್ತ ಸುಳಿಯದ ಜನರು.ಅಲ್ಲಲ್ಲಿ ಒಬ್ಬರನ್ನು ಬಿಟ್ಟರೆ ಮಂಗಳೂರಿನ ಎಲ್ಲಾ ಮಾರ್ಕೆಟ್ ಗಳು ಖಾಲಿ ಖಾಲಿ ಯಾಗಿದ್ದವು.ಅಂಗಡಿಗಳಲ್ಲಿ ಗ್ರಾಹಕರಿಗಾಗಿ ಕಾಯುತ್ತಿರುವ ವ್ಯಾಪಾರಸ್ಥರು.
ಮಂಗಳೂರಿನ ರಸ್ತೆಗಳಲ್ಲೂ ವಾಹನ ಸಂಖ್ಯೆ ವಿರಳವಾಗಿತ್ತು. ಹಾಗೂ ರಾಷ್ಟ್ರೀಯ ಹೆದ್ದಾರಿ ಯಲ್ಲಿ ವಾಹನ ಸಹ ವಿರಳವಾಗಿತ್ತು.ಹೆದ್ದಾರಿಗಳಲ್ಲಿ ಸರಕು ಸಾಗಾಟ ವಾಹನಗಳಿಗೆ ಮಾತ್ರ ಅವಕಾಶವಿದೆ.ದಿನಸಿ,ಹಣ್ಣು,ತರಕಾರಿ ಮಾಂಸದ ಅಂಗಡಿಗಳು ಮಾತ್ರ ಓಪನ್.ಬಾರ್,ಮಾಲ್,ವೈನ್ ಶಾಪ್ ಗಳು ಸಂಪೂರ್ಣ ಬಂದ್ ಆಗಿವೆ.ಹಾಗೂ ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳೂ ಸಂಪೂರ್ಣ ಬಂದ್ ಆಗಿವೆ.ಮತ್ತು ಕಂಟೈನ್ಮೆಂಟ್ ಝೋನ್ ಸಂಪೂರ್ಣ ಬಂದ್.
- Advertisement -