Monday, May 6, 2024
spot_imgspot_img
spot_imgspot_img

ಗಲ್ಲು ಶಿಕ್ಷೆಗೆ ಗುರಿಯಾದ ಮಗಳು : 11 ವರ್ಷಗಳ ಬಳಿಕ ಭೇಟಿಯಾದ ತಾಯಿ

- Advertisement -G L Acharya panikkar
- Advertisement -

ತಿರುವನಂತಪುರ: ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಯೆಮನ್ ಜೈಲಿನಲ್ಲಿರುವ ಮಗಳನ್ನು 11 ವರ್ಷದ ಬಳಿಕ ತಾಯಿ ಭೇಟಿಯಾಗಿದ್ದು, ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.

ಯೆಮೆನ್‌ನ ಜೈಲಿನಲ್ಲೇ ನಡೆದ ಈ ತಾಯಿ-ಮಗಳ ಪುನರ್‌ಮಿಲನ ಎಲ್ಲರನ್ನೂ ಭಾವುಕರನ್ನಾಗಿಸಿದೆ. 2017ರಲ್ಲಿ ತಲಾಲ್ ಅಬ್ಬೋ ಮಹ್ದಿ ಎಂಬ ಯೆಮని ಪ್ರಜೆಯನ್ನು ಕೊಂದಿದ್ದಕ್ಕಾಗಿ ಪ್ರಿಯಾರನ್ನು ನ್ಯಾಯಾಲಯ ಗಲ್ಲು ಶಿಕ್ಷೆಗೆ ಗುರಿಪಡಿಸಿದೆ. ಆಕೆಯ ತಾಯಿ ಪ್ರೇಮ ಅವರು ಮಗಳನ್ನು ನೋಡದೆ 11 ವರ್ಷಗಳು ಕಳೆದುಹೋಗಿದ್ದವು.

ಇದೀಗ ಸೇವ್ ನಿಮಿಷ ಪ್ರಿಯಾ ಅಂತಾರಾಷ್ಟ್ರೀಯ ಮಂಡಳಿ ವತಿಯಿಂದ ಪ್ರೇನಾ ಯೆಮೆನ್ ಜೈಲಿಗೆ ತೆರಳಿ ಮಗಳನ್ನು ಭೇಟಿಯಾಗಿದ್ದಾರೆ. ಮಗಳು ಓಡಿ ಬಂದು ನನ್ನನ್ನು ಅಪ್ಪಿ ಕಣ್ಣೀರಾದಳು ಎಂದು ಹೇಳಿಕೊಂಡಿರುವ ಪ್ರೇಮಾ ಭಾವುಕರಾಗಿದ್ದಾರೆ.

ಯೆಮೆನ್‌ಗೆ ತೆರಳಲು ಮತ್ತು ಸಂತ್ರಸ್ತ ವ್ಯಕ್ತಿಯ ಕುಟುಂಬದೊಂದಿಗೆ ಪರಿಹಾರ ಮೊತ್ತದ ಕುರಿತು ಸಂಧಾನ ನಡೆಸಲು ಪ್ರೇಮಾರಿಗೆ ಕಳೆದ ಡಿಸೆಂಬರ್‌ನಲ್ಲಿ ದೆಹಲಿ ಹೈಕೋರ್ಟ್ ಅನುಮತಿ ನೀಡಿತ್ತು.

- Advertisement -

Related news

error: Content is protected !!