Thursday, December 5, 2024
spot_imgspot_img
spot_imgspot_img

ಶಾಸಕರಾಗಲಿ, ಯಾರೇ ಆಗಲಿ ಅವರ ಮೇಲೆ ದಾಳಿ ಮಾಡಬಾರದು – ಗಲಭೆಗೆ ಡಿಕೆಶಿ ಖಂಡನೆ.

- Advertisement -
- Advertisement -

ಬೆಂಗಳೂರು: ಡಿಜೆ ಹಳ್ಳಿಯಲ್ಲಿ ನಡೆದ ಕೃತ್ಯವನ್ನು ಖಂಡಿಸುತ್ತೇನೆ. ಯಾರೂ ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಕೂಡ ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬಾರದು. ನಿನ್ನೆ ನಡೆದ ಘಟನೆಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ. ಶಾಸಕರಾಗಲಿ, ಯಾರೇ ಆಗಲಿ ಅವರ ಮೇಲೆ ದಾಳಿ ಮಾಡಬಾರದು. ಪೊಲೀಸ್ ಠಾಣೆಯ ಆಸ್ತಿ- ಪಾಸ್ತಿಗೆ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಪ್ರಚೋದನಕಾರಿ ಪೋಸ್ಟ್ ಕೂಡ ಸರಿಯಲ್ಲ. ಅದು ಕೂಡ ತಪ್ಪು. ಈ ಸಂಬಂಧ ಇಂದು ಬೆಂಗಳೂರು ಶಾಸಕರ ಸಭೆ ಕರೆದಿದ್ದೇನೆ. ಅಲ್ಲಿ ಚರ್ಚೆ ಮಾಡುತ್ತೇವೆ. ನಮ್ಮ ಶಾಸಕರು ಕೂಡ ಸ್ಥಳಕ್ಕೆ ಹೋಗಿ ಶಾಂತಿ ನೆಲಸುವಂತೆ ಪ್ರಯತ್ನ ಮಾಡಿದ್ದಾರೆ. ಆದರೆ ಯಾರೂ ಕಂಟ್ರೋಲ್‍ಗೆ ಸಿಕ್ಕಿಲ್ಲ. ಬಹಳ ವ್ಯವಸ್ಥಿತವಾದ ಸಂಚು ಇದೆ ಎಂಬುದನ್ನು ಮಾಧ್ಯಮದಲ್ಲಿ ನೋಡಿದ್ದೇನೆ ಎಂದರು.

- Advertisement -

Related news

error: Content is protected !!