Monday, June 8, 2026
spot_imgspot_img
spot_imgspot_img

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಸ್ಪತ್ರೆಯಿಂದ ಡಿಸ್ಚಾರ್ಜ್

- Advertisement -
- Advertisement -

ಬೆಂಗಳೂರು: ಕೊರೊನಾ ಸೋಂಕು ತಗುಲಿದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಗರದ ಸುಗುಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಅವರು ಕೊರೊನಾ ದಿಂದ ಗುಣಮುಖರಾಗಿದ್ದು, ಸದ್ಯ ಮನೆಯಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ.

ಆಗಸ್ಟ್ 25ರಂದು ಡಿಕೆಶಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ನಂತರ ಆಸ್ಪತ್ರೆಯಿಂದಲೇ ಪಕ್ಷದ ಮುಖಂಡರ ಜತೆ ಆನ್ ಲೈನ್ ಮೂಲಕ ಸಭೆ ನಡೆಸುತ್ತಿದ್ದರು.

ಇದೀಗ ಡಿಸ್ಚಾರ್ಜ್ ಆಗಿರುವ ಡಿಕೆಶಿ ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಡಾ.ರಂಗನಾಥ್ ಡಿಕೆಶಿ ಆರೋಗ್ಯದ ಆರೈಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!