Tuesday, October 13, 2026
spot_imgspot_img
spot_imgspot_img

‘108’ ಅಂಬುಲೆನ್ಸ್‌ ಮೇಲೆ ಅವಲಂಬನೆ ಆಗಬೇಡಿ: ಸಚಿವ ಯು.ಟಿ.ಖಾದರ್‌ ಹೇಳಿಕೆ

- Advertisement -
- Advertisement -

ಬೆಂಗಳೂರು: 108 ಸೇವೆ ಮೇಲೆ ಅವಲಂಬನೆ ಆಗಬೇಡಿ. ನೀವೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ.

ಎರಡು ತಿಂಗಳು ಅಂಬುಲೆನ್ಸ್‌ ಸೇವೆ ಸ್ಥಗಿತಗೊಳಿಸಿ ಮುಷ್ಕರ ಕೈಗೊಂಡ ಕುರಿತು ಮಾತನಾಡಿದ ಯು.ಟಿ.ಖಾದರ್‌, 108 ಅಂಬುಲೆನ್ಸ್ ಮೇಲೆ ಅವಲಂಬನೆ ಆಗಬೇಡಿ. ಎರಡು ತಿಂಗಳು ಕಾಲ ಅಂಬುಲೆನ್ಸ್ ಮೇಲಿನ ಅವಲಂಬನೆ ತಪ್ಪಿಸಿ. ನಾವು ವ್ಯವಸ್ಥೆ ಸರಿ ಮಾಡುತ್ತಿದ್ದೇವೆ. ಹೊಸ ಅಂಬುಲೆನ್ಸ್ ಖರೀದಿ ಮಾಡಿ ಸಮಸ್ಯೆ ಸರಿ ಮಾಡುತ್ತೇವೆ ಎಂದು ತಿಳಿಸಿದರು.

ಅಂಬುಲೆನ್ಸ್ ಶಾರ್ಟೇಜ್ ಇದೆ. ನಾವು ಖರೀದಿ ಮಾಡುತ್ತೇವೆ. ಅಲ್ಲಿವರೆಗೆ ನೀವೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸಚಿವರು ಅಂಬುಲೆನ್ಸ್‌ ಸೇವೆ ಬಗ್ಗೆ ಉಡಾಫೆ ಹೇಳಿಕೆ ನೀಡಿದ್ದಾರೆ.

ಅಂಬುಲೆನ್ಸ್‌ ನೌಕರರ ಬ್ಲ್ಯಾಕ್‌ಮೇಲ್‌ಗೆ ನಾನು ಬಗ್ಗಲ್ಲ. ಇವರ ದಬ್ಬಾಳಿಕೆಗೆ ನಾನು ಬಗ್ಗಲ್ಲ. ರೋಗಿಗಳಿಗೆ ತೊಂದರೆ ಆದರೆ ಕಂಪನಿಗಳೇ ಹೊಣೆ. ಮೂರು ತಿಂಗಳಿಗೊಮ್ಮೆ ಬಂದು ಮುಷ್ಕರ ಅಂದರೆ ಏನು ಅರ್ಥ? ನಾನು ಇವರ ಬ್ಲ್ಯಾಕ್‌ಮೇಲ್‌ಗೆ ಬಗ್ಗಲ್ಲ ಎಂದು ಅವರು ಹೇಳಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!