- Advertisement -
- Advertisement -
ಕನ್ನಡ ಸುದ್ದಿ ಮಾಧ್ಯಮದ ನಿರೂಪಕಿ ನಾಝಿಯಾ ಕೌಸರ್‌ಗೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ (ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ) ನೀಡಿದೆ. ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿವಿ 59ನೇ ವಾರ್ಷಿಕ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ ಡಾಕ್ಟರೇಟ್ ಪ್ರಧಾನ ಮಾಡಿದರು.
ವಕ್ಫ್ ಬೋರ್ಡ್ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಸಾರ್ವಜನಿಕ ಸಂಪರ್ಕದ ಪಾತ್ರ : ಒಂದು ಅಧ್ಯಯನ ಎಂಬ ವಿಷಯಕ್ಕೆ ನಾಝಿಯಾ ಕೌಸರ್‌ಗೆ ಡಾಕ್ಟರೇಟ್ ಲಭಿಸಿದೆ.
ಪ್ರೊಫೆಸರ್ ಜಗದೀಶ್ ಪ್ರಕಾಶ ಮಾರ್ಗದರ್ಶನದಲ್ಲಿ ನಾಝಿಯಯಾ ಪಿಎಚ್‌ಡಿ ಪಡೆದ ಮೊದಲ ಸುದ್ದಿ ನಿರೂಪಕಿಯಾಗಿದ್ದಾರೆ.
ಕನ್ನಡ ಸುದ್ದಿ ಮಾಧ್ಯಮದ ವಿವಿಧ ಚಾನೆಲ್‌ಗಳಲ್ಲಿ ನಿರೂಪಕಿಯಾಗಿ ನಾಝಿಯಾ ಕೆಲಸ ಮಾಡಿದ್ದಾರೆ.
- Advertisement -