- Advertisement -
- Advertisement -



ಮೂಡುಬಿದಿರೆ : ಕಲ್ಲಿನ ಕ್ವಾರಿಯೊಂದರಲ್ಲಿ ಉಡುಪಿ ಮೂಲದ ಲಾರಿಯೊಂದು ನೀರು ತುಂಬಿದ್ದ ಕೋರೆಗೆ ಉರುಳಿ ಬಿದ್ದ ಘಟನೆ ಮೂಡುಬಿದಿರೆಯ ನಿಡ್ಡೋಡಿ ಗ್ರಾಮದ ಬಂಗೇರಪದವು ಎಂಬಲ್ಲಿ ನಡೆದಿದೆ.
ಕ್ವಾರಿಯಲ್ಲಿ ಕಲ್ಲು ಸಾಗಾಟದ ಕಾರ್ಯದಲ್ಲಿ ತೊಡಗಿದ್ದ ಲಾರಿ ಏಕಾಏಕಿ ನಿಯಂತ್ರಣ ತಪ್ಪಿ ನೀರು ತುಂಬಿದ್ದ ಕೋರೆಯೊಳಗೆ ಬಿದ್ದಿದೆ ಎನ್ನಲಾಗಿದ್ದು, ಲಾರಿ ನೀರಿನಲ್ಲಿ ಮುಳುಗಿದರೂ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.
ಲಾರಿಯನ್ನು ಕೋರೆಗೆ ಬಿದ್ದಿರುವ ಸ್ಥಿತಿಯಿಂದ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಸಲಾಗಿದ್ದು, ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
- Advertisement -








