Friday, May 3, 2024
spot_imgspot_img
spot_imgspot_img

ಡಾಕ್ಟ”ರೇಟ್” ಚೀಪ್ ಚೀಪ್… – ರಶೀದ್ ವಿಟ್ಲ

- Advertisement -G L Acharya panikkar
- Advertisement -

ಅಧ್ಯಾಯ 1
ನನ್ನ ಇಬ್ಬರು ಸಹೋದರರು ಎಂ.ಎಸ್ಸಿ ಮುಗಿಸಿ ನಂತರ ನಿರಂತರ ಅಧ್ಯಯನ ಮಾಡಿ ಬಹಳ ಶ್ರಮಪಟ್ಟು ಪಿ.ಎಚ್.ಡಿ. ಮುಗಿಸಿ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಕೆಲ ವರ್ಷಗಳ ಹಿಂದೆ ಒಂದೇ ದಿನ ಒಂದೇ ವೇದಿಕೆಯಲ್ಲಿ ಡಾಕ್ಟರೇಟ್ ಪದವಿ ಪಡೆದರು. ಬಹುಶ: ಒಂದೇ ವೇದಿಕೆಯಲ್ಲಿ ಒಂದೇ ಮನೆಯ ಅಣ್ಣ ತಮ್ಮಂದಿರು ಪಿ.ಎಚ್.ಡಿ. ಪದವಿ ಸ್ವೀಕರಿಸುವುದು ಬಹಳ ಅಪರೂಪ. ಆ ದಾಖಲೆಗೆ ನನ್ನ ತಮ್ಮಂದಿರು ಅರ್ಹರು ಎನ್ನುವುದಕ್ಕೆ ನನಗೆ ಹೆಮ್ಮೆ ಇದೆ. ಇತ್ತೀಚೆಗೆ ನನ್ನ ತಮ್ಮನ ಹೆಂಡತಿ ಕೂಡಾ ಪಿ.ಎಚ್.ಡಿ. ಪದವೀಧರೆ ಆದಳು. ಹೀಗೇ ಒಂದೇ ಕುಟುಂಬದಲ್ಲಿ ಮೂವರು ಡಾಕ್ಟರೇಟ್ ಗಳು! ಹೀಗೇ ಸಾಧನೆ ಮಾಡಿ ಪಿ.ಎಚ್.ಡಿ. ಪಡೆದವರ ಸಂಖ್ಯೆ ನಮ್ಮ ಕರಾವಳಿಯಲ್ಲಿ ಅದೆಷ್ಟೋ ಇದೆ. ಅವರಿಗೆಲ್ಲಾ ಹ್ಯಾಟ್ಸಾಫ್.

ಅಧ್ಯಾಯ 2
ಸಮಾಜದಲ್ಲಿ ಗುರುತಿಸಿರುವ ಅದೆಷ್ಟೋ ಗಣ್ಯರಿಗೆ ವಿವಿಧ ವಿವಿ ಗಳು ಗೌರವ ಡಾಕ್ಟರೇಟ್ ನೀಡುತ್ತಿದೆ. ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರಿಗೆ ಎರಡು ಗೌರವ ಡಾಕ್ಟರೇಟ್ ನೀಡಲಾಗಿದೆ. ಜಿಲ್ಲೆ, ರಾಜ್ಯ, ರಾಷ್ಟ್ರದ ಅದೆಷ್ಟೋ ಸಾಧಕರು ವಿವಿಧ ವಿವಿಗಳ ಗೌ.ಡಾ. ಗೆ ಪಾತ್ರರಾಗಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಯೇನಪೋಯ ಅಬ್ದುಲ್ಲಕುಂಞಿ ಮೊದಲಾದವರೂ ಈ ಪಟ್ಟಿಯಲ್ಲಿದ್ದಾರೆ. ಆದರೆ ಅವರ್ಯಾರೂ ಸ್ವತಃ ತಮ್ಮ ಹೆಸರಿನ ಎದುರು ಡಾ. ಅಂತ ಸೇರಿಸುವುದಿಲ್ಲ. ಅಲ್ಲದೇ ಪಿ.ಎಚ್.ಡಿ. ಅಧ್ಯಯನ ಮಾಡಿದವರನ್ನು ಹೊರತುಪಡಿಸಿ ಗೌ.ಡಾ. ಪುರಸ್ಕೃತರು ತಮ್ಮ ಹೆಸರಿನ ಜೊತೆಗೆ ಡಾ. ಸೇರಿಸಬಾರದೆಂಬ ನಿಯಮವೂ ಇದೆ.

ಅಧ್ಯಾಯ 3
ಪ್ರಸ್ತುತ ಕಾಲಘಟ್ಟದಲ್ಲಿ ಡಾಕ್ಟರೇಟ್ ಪದವಿಯ ಮರ್ಯಾದಿ ತೆಗೆಯಲು ಕೆಲವು ಸ್ವಯಂಘೋಷಿತ ಸಮಾಜ ಸೇವಕರು, ಉದ್ಯಮಿಗಳು ಅಣಬೆಗಳಂತೆ ಹುಟ್ಟಿಕೊಂಡಿದ್ದಾರೆ. ಈಗೀಗ ಕೆಲವೊಂದು ಫೇಕ್ ಯೂನಿವರ್ಸಿಟಿಗಳು ಹತ್ತು ಸಾವಿರದಿಂದ ಹಿಡಿದು ಲಕ್ಷಾಂತರ ರೂಪಾಯಿಗೆ ಡಾಕ್ಟರೇಟನ್ನು ಬಿಕರಿಗಿಟ್ಟಿದೆ. ಕೆಲವು ಪ್ರಚಾರಪ್ರಿಯರು ಈ ಫೇಕುಗಳ ಗಿರಾಕಿಗಳು. ಸಮಾಜದಲ್ಲಿ ನಿಕೃಷ್ಟವಾಗಿ ಗುರುತಿಸಿಕೊಂಡವರು ಕೂಡಾ ಇಂದು ಎಲ್ಲೋ ದೂರದ ಊರಿನ ಅಥವಾ ವಿದೇಶದಲ್ಲಿರುವ ಹೆಸರಿಲ್ಲದ ಯೂನಿವರ್ಸಿಟಿಯ ಫೇಕು ಗೌ.ಡಾ. ಗಳಾಗಿರುತ್ತಾರೆ. ನಮ್ಮ ಜಿಲ್ಲೆಯಲ್ಲೂ ಅಂತಹ ಗೌ.ಡಾ. ಗಳು ವ್ಯಾಪಕವಾಗಿ ಬೆಳೆದಿದ್ದಾರೆ. ಬಹುಶಃ ಬುದ್ದಿವಂತ ಜನ ಇವರ ವರಸೆಯನ್ನು ನೋಡಿ ಛೀ… ಥೂ… ಅಂದರೂ, ಮಾನ ಹೋದರೂ ತಮ್ಮ ಹೆಸರಿನ ಮುಂದೆ ಡಾ. ಅಂತ ಸೇರಿಸಿ ಮೂರ್ಕಾಸಿನ ಮೂರ್ಖರಂತೆ ವರ್ತಿಸುವುದು ನೋಡುವಾಗ ವಾಕರಿಕೆ ಬರುತ್ತದೆ. ಅಧ್ಯಾಯ 1 ಮತ್ತು 2 ರ ನಿಜವಾದ ಡಾಕ್ಟರೇಟ್ ಗಳು ಇಂತಹವರ ಹಾವಳಿಗೆ ಸಿಲುಕಿ ನಲುಗಿದ್ದಾರೆ. ಕೇರಳದ ಭಾಷೆಯಲ್ಲಿ ಹೇಳುವುದಾದರೆ “ತಲೆಚ್ಚೋರ್” (ತಲೆಬುರುಡೆ) ಎನ್ನೋದೇ ಇವರಿಗಿಲ್ಲ. ವಾಟ್ ಎ ಜೋಕ್ ಮಾರ್ರೆ..!
-ರಶೀದ್ ವಿಟ್ಲ.

- Advertisement -

Related news

error: Content is protected !!