Friday, May 3, 2024
spot_imgspot_img
spot_imgspot_img

ಸೀಟ್ ಬ್ಲಾಕಿಂಗ್ ದಂಧೆ: ಖಡಕ್ ವಾರ್ನಿಂಗ್ ಕೊಟ್ಟ ಸಚಿವ ಡಾ. ಸುಧಾಕರ್

- Advertisement -G L Acharya panikkar
- Advertisement -

ಬೆಂಗಳೂರು: ಕೆಲ ವೈದ್ಯಕೀಯ ಕಾಲೇಜುಗಳು ವೈದ್ಯಕೀಯ ಸೀಟುಗಳನ್ನು ಬ್ಲಾಕ್ ಮಾಡುವ ದಂಧೆಯಲ್ಲಿ ತೊಡಗಿರುವುದು ನಿಜ. ಈ ಬಗ್ಗೆ ಸರ್ಕಾರ ರಚಿಸಿದ್ದ ಸಮಿತಿ ನೀಡಿದ ವರದಿಯಲ್ಲಿ ದೃಢಪಟ್ಟಿದೆ. ವರದಿ ಪ್ರಕಾರ ತಪ್ಪಿತಸ್ಥ ಕಾಲೇಜುಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಎನ್. ರವಿಕುಮಾರ್ ಅವರು ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ ತಡೆಗೆ ಕ್ರಮವೇನು? ಎಂಬ ಪ್ರಶ್ನೆ ಮುಂದಿಟ್ಟಾಗ ಸುಧಾಕರ್ ಉತ್ತರಿಸಿ, ಬಹಳ ವರ್ಷಗಳಿಂದ ದಂಧೆ ನಡೆಯಿತ್ತಿರುವುದು ಸತ್ಯ, ಕಾನೂನಿನ ಲೋಪದೋಷಗಳನ್ನು ಬಳಸಿಕೊಂಡು ಕೆಲವು ವೈದ್ಯಕೀಯ ಕಾಲೇಜುಗಳು ಸುಪ್ರೀಂ ಕೋರ್ಟ್ ಆದೇಶವನ್ನು ಅವರಿಗೆ ಬೇಕಾದಂತೆ ಬಳಕೆ ಮಾಡಿಕೊಳ್ಳುತ್ತಿವೆ ಅದಕ್ಕೆ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಈ ಸಮಿತಿ ವರದಿಯಂತೆ ದಂಡವನ್ನು ಅದರಷ್ಟು ಹೆಚ್ಚು ಮಾಡಲಿದ್ದೇವೆ, ಸೀಟು ಸೆರಂಡರ್ ಮಾಡಲು 25 ಲಕ್ಷ ದಂಡ ವಿಧಿಸುತ್ತೇವೆ ಅಷ್ಟು ಹಣ ಕೊಟ್ಟು ಯಾರೂ ಇನ್ಮುಂದೆ ಸೀಟುಗಳನ್ನು ಸರಂಡರ್ ಮಾಡಲ್ಲ ಎಂದರು.

ಈಗಾಗಲೇ ಸೀಟ್ ಬ್ಲಾಕಿಂಗ್ ಬಗ್ಗೆ ತನಿಖಾ ಸಂಸ್ಥೆಗಳು ದಾಳಿ ನಡೆಸಿ ತನಿಖೆ ಕ್ರಮ ಕೈಗೊಂಡಿವೆ. ಕಪ್ಪುಹಣಕ್ಕೆ ನಾವು ನೋಟಿಸ್ ಕೊಡಲು ಸಾಧ್ಯವಿಲ್ಲ. ಕೇಂದ್ರದ ಐಟಿ ಇಲಾಖೆಯು ದಾಳಿ ಮಾಡಿ ಹಣ ವಶಕ್ಕೆ ಪಡೆದಿದೆ. ಹಾಗಾಗಿ ರಾಜ್ಯ ಸರ್ಕಾರ ಯಾವುದೇ ನೋಟಿಸ್ ನೀಡಿಲ್ಲ. ನಮ್ಮ ವಶದಲ್ಲಿರುವ ವೈದ್ಯಕೀಯ ಕಾಲೇಜು ತಪ್ಪು ಮಾಡಿದ್ರೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ. ತಪ್ಪಿತಸ್ಥ ಕಾಲೇಜುಗಳನ್ನು ಬ್ಲಾಕ್ ಲಿಸ್ಟ್​​ಗೆ ಸೇರಿಸಲು ಪರಿಶೀಲನೆ ನಡೆಸಲಾಗುತ್ತೆ ಎಂದು ಕೆ.ಸುಧಾಕರ್ ಪುನರುಚ್ಚರಿಸಿದರು.

- Advertisement -

Related news

error: Content is protected !!