Saturday, April 27, 2024
spot_imgspot_img
spot_imgspot_img

2000 ಮುಖಬೆಲೆಯ ನೋಟು ಬದಲಾಯಿಸಲು ಗಡುವು ವಿಸ್ತರಣೆ

- Advertisement -G L Acharya panikkar
- Advertisement -

ಭಾರತೀಯ ರಿಸರ್ವ್ ಬ್ಯಾಂಕ್‌ಗಳಿಂದ ದೇಶದಲ್ಲಿ ರೂ. 2000 ನೋಟು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಿಸಲಾಗಿತ್ತು. ಅದಕ್ಕೆ ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿತ್ತು. ಆದರೆ ಈಗ ಆರ್‌ಬಿಐ ಈ ಗಡುವನ್ನು ವಿಸ್ತರಿಸಿದೆ. ಅಕ್ಟೋಬರ್‌ 7 ರವರೆಗೆ 2000 ಮುಖಬೆಲೆಯ ನೋಟುಗಳನ್ನು ಬದಲಾಯಿಸಲು ಕಾಲಾವಕಾಶ ನೀಡಿದೆ.

ಸೆಂಟ್ರಲ್ ಬ್ಯಾಂಕ್ ಸೆಪ್ಟೆಂಬರ್ 1 ರಂದು 3.32 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳು ಅಥವಾ ಚಲಾವಣೆಯಲ್ಲಿರುವ 93 ಶೇಕಡಾ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಎಂದು ಹೇಳಿದೆ.

ಜುಲೈ 31 ರ ಹೊತ್ತಿಗೆ, 3.14 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ನೋಟುಗಳು ಅಂದರೆ ಚಲಾವಣೆಯಲ್ಲಿರುವ ಶೇ 88 ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದವು. ಮನಿಕಂಟ್ರೋಲ್ ಕೆಲವು ಅನುಭವಿ ಬ್ಯಾಂಕರ್‌ಗಳೊಂದಿಗೆ ಮಾತನಾಡಿದಾಗ, ಅವರೂ, ‘ರೂ. 2000 ನೋಟುಗಳನ್ನು ಚಲಾವಣೆಯಿಂದ ಶೇಕಡಾ 100 ರಷ್ಟು ಹಿಂಪಡೆಯುವ ಉದ್ದೇಶದಿಂದ ಕೇಂದ್ರೀಯ ಬ್ಯಾಂಕ್ ಗಡುವನ್ನು ಇನ್ನೂ ಒಂದು ತಿಂಗಳು ವಿಸ್ತರಿಸಬಹುದು ಎಂದಿದ್ದಾರೆ.

2000 ಮುಖಬೆಲೆಯ ನೋಟುಗಳನ್ನು ಬದಲಾಯಿಸಲು ಇನ್ನೊಂದೇ ದಿನ ಬಾಕಿ ಅಂತ ತಲೆಕಡಿಸಿಕೊಂಡಿದ್ದವರಿಗೆ ಈ ಸುದ್ದಿ ನೆಮ್ಮದಿ ಕೊಡಲಿದೆ ಅಂದ್ರೆ ತಪ್ಪಾಗಲ್ಲ.

- Advertisement -

Related news

error: Content is protected !!