ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಬೆಂಗಳೂರು: ನಮ್ಮ ಇಲಾಖೆಗೆ 800 ಕೋಟಿ ರೂ.ಅನುಮೋದನೆ ಬಂದಿದೆ. ಆದರೆ ಖರ್ಚಾಗಿರುವುದು 33 ಕೋಟಿ ರೂ. ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಕಾಂಗ್ರೆಸ್ ಆರೋಪಕ್ಕೆ ಪ್ರತ್ಯುತ್ತರ ಕೊಟ್ಟಿದ್ದಾರೆ.
ನಿಜವಾಗಿಯೂ ಇದೊಂದು ವಿಪರ್ಯಾಸದ ಸುದ್ದಿಗೋಷ್ಠಿ ಎಂದು ಮಾತು ಆರಂಭಿಸಿದ ಅವರು, ವಿಪಕ್ಷ ನಾಯಕರು 13-14 ಆಯವ್ಯಯ ಮಂಡಿಸಿದ್ದೀರಿ. ಪ್ರಸ್ತಾವನೆ, ಅನುಮೋದನೆಗೂ ನಿಮಗೆ ವ್ಯತ್ಯಾಸ ಗೊತ್ತಿರಬೇಕು ಅಲ್ವಾ ಎಂದು ಪ್ರಶ್ನಿಸಿದ್ರು.
ಐಸಿಯುಗಾಗಿ 140 ವೆಂಟಿಲೇರ್ ಖರೀದಿ ಮಾಡಲಾಗಿದೆ. ಡ್ರಾಗರ್ ಕಂಪೆನಿಯಿಂದ ಇದನ್ನು ಖರೀದಿಸಿದ್ದೇವೆ ಎಂದರು. ಆರೋಪ ಮಾಡಿದ ಕಾಂಗ್ರೆಸ್ ನ ಇಬ್ಬರೂ ನಾಯಕರ ಮನೆಯಲ್ಲಿಯೂ ಡಾಕ್ಟರ್ಸ್ ಗಳಿದ್ದಾರೆ. ಡ್ರಾಗರ್ ಕಂಪೆನಿ ಬಗ್ಗೆ ಅವರು ಮನೆಯಲ್ಲಿಯೇ ತಿಳಿದುಕೊಳ್ಳಲಿ ಎಂದು ಹೇಳಿದರು.
ಇಡೀ ವಿಶ್ವದಲ್ಲೇ ವೆಂಟಿಲೇಟರ್ ಸಮಸ್ಯೆಯಿದೆ. ನಾವು 13 ಲಕ್ಷ ರೂ.ಕೊಟ್ಟು ವೆಂಟಿಲೇರ್ ತಂದಿದ್ದೇವೆ. ನೀವು ಅಧಿಕಾರದಲ್ಲಿದ್ದಾಗ 21 ಲಕ್ಷಕ್ಕೆ ವೆಂಟಿಲೇಟರ್ ಖರೀದಿ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ್ರು.
1 ರೂ.ಭ್ರಷ್ಟಾಚಾರ ಆಗಿದ್ರೂ ನೇಣಿಗೆ ಹಾಕಿ. ನಾವು ಯಾವುದೇ ತನಿಖೆಗೂ ಸಿದ್ಧ.
ಕಾಂಗ್ರೆಸ್ ನವರು ಜನರನ್ನು ದಿಕ್ಕು ತಪ್ಪಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಯಾವ ದಾಖಲೆ ಇದೆ ನಿಮ್ಮ ಬಳಿ ಆರೋಪ ಮಾಡೋಕೆ ಎಂದು ಪ್ರಶ್ನಿಸಿದ ಅವರು, ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನಮಾಡಬೇಕು ಎಂದು ಕಿಡಿಕಾರಿದರು.