Sunday, June 14, 2026
spot_imgspot_img
spot_imgspot_img

ಡಾ. ರೇಣುಕಾಪ್ರಸಾದ್‌ಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಮಂಜೂರು; ನಾಳೆ ಬಿಡುಗಡೆ ಸಾಧ್ಯತೆ

- Advertisement -
- Advertisement -

ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಯಾಗಿದ್ದ ಪ್ರೊಫೆಸರ್ ಎ.ಎಸ್. ರಾಮಕೃಷ್ಣರವರ ಕೊಲೆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಶಿಕ್ಷೆಗೊಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನಿರ್ದೇಶಕ ಡಾ. ರೇಣುಕಾಪ್ರಸಾದ್ ಕೆ.ವಿ.ಯವರಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದು ಬಂದಿದೆ. ನ್ಯಾಯಾಲಯಕ್ಕೆ ಶೂರಿಟಿ ಕೊಟ್ಟ ಬಳಿಕ ಅವರು ಬಿಡುಗಡೆಯಾಗಲಿದ್ದು, ನಾಳೆ ಅದು ನಡೆಯುವ ಸಾಧ್ಯತೆ ಇದೆ.

ಕಳೆದ ಅಕ್ಟೋಬರ್ 5 ರಂದು ಆಕಾಶಭವನ ಶರಣ್ ಹೊರತುಪಡಿಸಿ ಡಾ. ರೇಣುಕಾಪ್ರಸಾದ್ ಮತ್ತು ಇತರ ಆರೋಪಿಗಳ ಬಂಧನವಾಗಿತ್ತು. ಮೂರು ತಿಂಗಳು ಕಳೆದ ಹಿನ್ನಲೆಯಲ್ಲಿ ಎಲ್ಲಾ ಬಂಧಿತರಿಗೂ ಜಾಮೀನು ದೊರೆತಿರುವುದಾಗಿ ತಿಳಿದು ಬಂದಿದೆ.

- Advertisement -

Related news

error: Content is protected !!