Friday, June 27, 2025
spot_imgspot_img
spot_imgspot_img

ಮಾದಕವಸ್ತು ಪ್ರಕರಣ; ಮಲಯಾಳಂ ನಟ ಶೈನ್ ಟಾಮ್ ಚಾಕೊ ಬಂಧನ..!

- Advertisement -
- Advertisement -

ಕೊಚ್ಚಿ: ಕೊಚ್ಚಿಯ ಹೋಟೆಲ್ ಒಂದರಿಂದ ಮಾದಕವಸ್ತು ದಾಳಿಯ ಸಂದರ್ಭದಲ್ಲಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಖ್ಯಾತ ನಟ ಶೈನ್ ಟಾಮ್ ಚಾಕೊ ಅವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಮಾರು 4 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಅವರನ್ನು ಬಂಧಿಸಲಾಗಿದೆ.

ಅವರ ವಿರುದ್ಧ ಮಾದಕ ದ್ರವ್ಯ ಮತ್ತು ಮನೋವಿಕೃತಿ ಪದಾರ್ಥಗಳ ಕಾಯ್ದೆಯ ಸೆಕ್ಷನ್ 27 (ಯಾವುದೇ ಮಾದಕ ದ್ರವ್ಯ ಅಥವಾ ಮನೋವಿಕೃತಿ ವಸ್ತುವಿನ ಸೇವನೆ) ಮತ್ತು 29ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವೈದ್ಯಕೀಯ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು ನೀಡಿದ ಔಪಚಾರಿಕ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ, ಚಾಕೊ ಇಂದು ಕೊಚ್ಚಿ ನಗರ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದರು. ಇನ್ನು ಚಾಕೊ ಅವರಿಗೆ ಜಾಮೀನು ಸಿಗುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬುಧವಾರ ರಾತ್ರಿ, ಪೊಲೀಸ್ ತಂಡ ಹೋಟೆಲ್‌ಗೆ ಭೇಟಿ ನೀಡಿದ್ದ ವಿಚಾರ ತಿಳಿದ ಕೂಡಲೇ ಶೈನ್ ಮೂರನೇ ಮಹಡಿಯಲ್ಲಿರುವ ತನ್ನ ಕೋಣೆಯ ಕಿಟಕಿಯಿಂದ ಎರಡನೇ ಮಹಡಿಗೆ ಜಿಗಿದಿದ್ದರು. ಬಳಿಕ ಅದೇ ಮಹಡಿಯಲ್ಲಿ ನಿರ್ಮಾಣ ಮಾಡಲಾದ ‘ಈಜುಕೊಳ’ದ ಮೂಲಕ ಮೆಟ್ಟಿಲುಗಳ ಕೆಳಗೆ ಇಳಿದು ಪರಾರಿಯಾಗಿದ್ದರು ಎನ್ನಲಾಗಿದೆ.

- Advertisement -

Related news

error: Content is protected !!