Saturday, June 20, 2026
spot_imgspot_img
spot_imgspot_img

ಸ್ಯಾಂಡಲ್​ವುಡ್​ ಡ್ರಗ್ಸ್​ ಮಾಫಿಯಾ ಆರೋಪ ಪ್ರಕರಣ – ಅಕುಲ್ ಬಾಲಾಜಿ ಹಾಗೂ ನಟ ಸಂತೋಷ್​ ಇಂದು ವಿಚಾರಣೆಗೆ ಹಾಜರಿ

- Advertisement -
- Advertisement -

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಮಾಫಿಯಾ ಆರೋಪ ಪ್ರಕರಣ ಸಂಬಂಧ ಸಿಸಿಬಿಯಿಂದ ನೋಟಿಸ್​ ಜಾರಿಯಾಗಿದ್ದ ಹಿನ್ನೆಲೆ ನಿರೂಪಕ ಅಕುಲ್ ಬಾಲಾಜಿ ಹಾಗೂ ನಟ ಸಂತೋಷ್​ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ವಕೀಲ ಪ್ರಕಾಶ್ ಎನ್ನುವವರ ಜೊತೆ ಅಕುಲ್ ಆಗಮಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಅಕುಲ್ ಬಾಲಾಜಿ, ರೋಡ್ ಬ್ಲಾಕ್ ಆಗಿರೋದ್ರಿಂದ ಲೇಟ್ ಆಯ್ತು. ಯಾಕೆ ವಿಚಾರಣೆಗೆ ಕರೆದಿದ್ದಾರೆ ಗೊತ್ತಿಲ್ಲ. ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ನನಗೆ ವೈಭವ್ ಜೈನ್ ಜೊತೆ ಹಾಯ್ ಬಾಯ್ ಫ್ರೆಂಡ್ ಶಿಪ್ ಇದೆ ಎಂದರು. ನನಗೆ ಸಿಸಿಬಿ ಬಗ್ಗೆ ಬಹಳ ಗೌರವ ಇದೆ. ಈ ತನಿಖೆಗೆ ಸಹಕಾರ ಕೊಡ್ತೇನೆ. ಅವರೇನು ಕೇಳ್ತಾರೆ ಅದಕ್ಕೆ ನನಗೆ ಗೊತ್ತಿರುವ ವಿಚಾರ ತಿಳಿಸುತ್ತೇನೆ. ತಪ್ಪು ಮಾಡಿಲ್ಲ ಅಂದ್ರೆ ಹೆದರಬೇಡ ಅಂತ ತಾಯಿ ಕಲಿಸಿದ್ದಾರೆ. ಹೀಗಾಗಿ ನಾನು ತಪ್ಪು ಮಾಡಿಲ್ಲ ಹೆದರಿಕೆ ಇಲ್ಲ ಎಂದು ಹೇಳಿದ್ರು.

ನಟ ಸಂತೋಷ್ ಆರ್ಯನ್ ಹಾಗೂ ಮಾಜಿ ಕಾರ್ಪೊರೇಟರ್ ಆರ್.ವಿ ​​ಯುವರಾಜ್​​​ ಕೂಡ ವಿಚಾರಣೆಗೆ ಹಾಜರಾಗಿದ್ದಾರೆ. ಸಂತೋಷ್​​ಗೆ ಸಿಸಿಬಿ ಇನ್ಸ್​​ಪೆಕ್ಟರ್ ಪುನೀತ್, ಯುವರಾಜ್​​ಗೆ ಇನ್ಸ್​​ಪೆಕ್ಟರ್ ಪ್ರಶಾಂತ್ ಹಾಗೂ ಅಕುಲ್ ಬಾಲಾಜಿಗೆ ಅಂಜುಮಾಲಾ ನಾಯಕ್ ಮತ್ತು ಮಲ್ಲೇಶ್ ಬೋಳೆತ್ತಿನ್ ಪ್ರಶ್ನೆಗಳನ್ನ ಕೇಳಲಿದ್ದಾರೆ.

- Advertisement -

Related news

error: Content is protected !!