Tuesday, May 14, 2024
spot_imgspot_img
spot_imgspot_img

ಡ್ರಗ್ಸ್ ಮಾಫಿಯಾ ಕೇಸ್: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಸಿಸಿಬಿ ನೋಟಿಸ್

- Advertisement -G L Acharya panikkar
- Advertisement -

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ಸಿಸಿಬಿ ಅಧಿಕಾರಿಗಳು ಮತ್ತೆ ನೋಟಿಸ್ ನೀಡಿದ್ದಾರೆ. ಮೊನ್ನೆ ನಡೆದ ವಿಚಾರಣೆ ವೇಳೆ 15 ಮಂದಿ ನಟ-ನಟಿಯರ ಹೆಸರನ್ನು ಇಂದ್ರಜಿತ್ ಹೇಳಿದ್ದಾರೆ. ಹೀಗಾಗಿ ದಾಖಲೆ ಒದಗಿಸುವಂತೆ ಇಂದ್ರಜಿತ್ ಗೆ ಸಿಸಿಬಿ ಟೀಂ ಮತ್ತೊಂದು ನೋಟಿಸ್ ಜಾರಿ ಮಾಡಿದೆ. ಈ ಸಂಬಂಧ ನಾಳೆ 11 ಗಂಟೆಗೆ ಸಿಸಿಬಿ ಕಚೇರಿಗೆ ಹಾಜರಾಗುವಂತೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸೂಚನೆ ನೀಡಿದ್ದಾರೆ.

ಪ್ರಕರಣ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಇನ್ನೂ ಡ್ರಗ್ಸ್ ಜಾಲ ಬೇಧಿಸಲು ಕಾರ್ಯಚರಣೆ ನಡೆಸುತ್ತಿದ್ದೇವೆ. ಹೊರರಾಜ್ಯದಿಂದ ಬರುವ ಬಸ್ ಗಳು, ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಇಂದ್ರಜಿತ್ ವಿಚಾರಣೆ ಬಗ್ಗೆ ಮಾತನಾಡಿದ ಅವರು, ಮೊನ್ನೆ ನಡೆದ ವಿಚಾರಣೆ ವೇಳೆ ಅವರು ದಾಖಲೆಗಳನ್ನು ಕೊಟ್ಟಿಲ್ಲ. ಅವರು ದಾಖಲೆ ಕೊಟ್ಟಿದ್ದೀನಿ ಅಂದ್ರೆ ಅದರ ಬಗ್ಗೆ ವಿಚಾರಣೆ ನಡೆಸುತ್ತೇವೆ. ಹೀಗಾಗಿ ನಾಳೆ ಬೆಳಿಗ್ಗೆ 11 ಗಂಟೆಗೆ ಅವರನ್ನು ಸಿಸಿಬಿ ಕಚೇರಿಗೆ ಬರಲು ಹೇಳಿದ್ದೇನೆ ಎಂದು ತಿಳಿಸಿದರು.

- Advertisement -

Related news

error: Content is protected !!