Thursday, June 18, 2026
spot_imgspot_img
spot_imgspot_img

ಕಾಸರಗೋಡು: ಪಾರ್ಸೆಲ್ ಸಾಗಾಟದ ಸೋಗಿನಲ್ಲಿ ಬೈಕ್ ನಲ್ಲಿ ಮಾದಕ ವಸ್ತು ಸಾಗಾಟ, ಇಬ್ಬರ ಬಂಧನ

- Advertisement -
- Advertisement -

ಕಾಸರಗೋಡು: ಪಾರ್ಸೆಲ್ ಸಾಗಾಟದ ಸೋಗಿನಲ್ಲಿ ಬೈಕ್ ನಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅಬಕಾರಿ ದಳದ ಸಿಬ್ಬಂದಿ ಗಳು ಬಂಧಿಸಿದ್ದಾರೆ. ಇವರ ಬಳಿಯಿಂದ 12.53 ಗ್ರಾಂ ಎಂ. ಡಿ .ಎಂ. ಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ಕೂಡ್ಲು ನೀರ್ಚಾಲ್ ನ ಅಮಾನ್ ಸಾಜದ್ ( 20) ಮತ್ತು ಅಡ್ಕತ್ತ ಬೈಲ್ ನ ಕೆ. ಎಂ ಅಮೀರ್ (34) ಬಂಧಿತರು.

ಇವರು ಸಂಚರಿಸುತ್ತಿದ್ದ ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ. ವಾಹನ ತಪಾಸಣೆ ನಡೆಸುತ್ತಿದ್ದ ಕಾಸರಗೋಡು ಅಬಕಾರಿ ದಳದ ಸಿಬ್ಬಂದಿಗಳು ಬೈಕ್ ನ್ನು ತಡೆದು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ. ಪಾರ್ಸೆಲ್ ಸರ್ವಿಸ್ ಹೆಸರಿನಲ್ಲಿ ಇವರು ಮಾದಕ ವಸ್ತು ಸಾಗಾಟ ಮಾಡುತ್ತಿದ್ದುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ,ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Related news

error: Content is protected !!