Saturday, June 28, 2025
spot_imgspot_img
spot_imgspot_img

ಸಿಸಿಬಿ ಮುಂದೆ ಹಲವರ ಹೆಸರು ಹೇಳಿದ್ದೇನೆ: ಇಂದ್ರಜಿತ್ ಲಂಕೇಶ್

- Advertisement -
- Advertisement -

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಮುಂದೆ 10ರಿಂದ 15 ಮಂದಿಯ ಹೆಸರನ್ನು ಹೇಳಿದ್ದೇನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿ ಇಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿಚಾರಣೆಗೆ ಹಾಜರಾಗಿದ್ದರು. ಸುಮಾರು ಐದೂವರೆ ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾನು ಹಲವರ ಹೆಸರನ್ನು ಸಿಸಿಬಿ ಮುಂದೆ ಹೇಳಿದ್ದೇನೆ. ಮುಂದೆ ಸಿಸಿಬಿ ಯವರೇ ಅವರ ಹೆಸರನ್ನು ನಿಮ್ಮ ಮುಂದೆ ಹೇಳಲಿದ್ದಾರೆ. ಸಮಾಜಕ್ಕೆ ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಸಿಸಿಬಿ ತಂಡ ನನ್ನ ಬೆನ್ನು ತಟ್ಟಿದೆ ಎಂದು ಹೇಳಿದರು.

- Advertisement -

Related news

error: Content is protected !!