Saturday, April 20, 2024
spot_imgspot_img
spot_imgspot_img

ಸದಾನಂದ ಗೌಡರ ವಿರುದ್ಧ ಫೇಕ್ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್; ಪೊಲೀಸ್ ಕಮಿಷನರ್ ಗೆ ದೂರು ನೀಡಿದ ಡಿ.ವಿ.ಎಸ್

- Advertisement -G L Acharya panikkar
- Advertisement -
driving

ತಮ್ಮ ವಿರುದ್ಧ ಫ್ಯಾಬ್ರಿಕೇಟೆಡ್, ಫೇಕ್, ಮಿಶ್ರಿತ ಹಾಗೂ ರಾಜಕೀಯ ಪ್ರೇರಿತ ವಿಡಿಯೋವನ್ನ ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ ಸದಾನಂದಗೌಡರವರು ಆರೋಪಿಸಿದ್ದಾರೆ.

ಈ ಕುರಿತು ನಗರ ಪೊಲೀಸ್ ಆಯುಕ್ತರಿಗೆ ದೂರನ್ನು ನೀಡಿರುವ ಸದಾನಂದಗೌಡ, ನನ್ನ ವಿರುದ್ಧ ರಾಜಕೀಯ ಪ್ರೇರಿತವಾಗಿ ಫ್ಯಾಬ್ರಿಕೇಟೆಡ್, ಫೇಕ್, ಮಿಶ್ರಿತ ವಿಡಿಯೋ ಒಂದನ್ನು ಮಾಡಿದ್ದಾರೆ ಅನ್ನೋದು ನನ್ನ ಗಮನಕ್ಕೆ ಬಂದಿದೆ. ಇದನ್ನೇ ಫೇಸ್​ಬುಕ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾದಲ್ಲಿ ಕೂಡ ಹರಿ ಬಿಡಲಾಗುತ್ತಿದೆ. ಕೇವಲ ನನ್ನ ಇಮೇಜ್ ಅನ್ನು ನಾಶ ಮಾಡುವುದಕ್ಕಾಗಿಯೇ ಈ ವಿಡಿಯೋವನ್ನ ಹರಿ ಬಿಡಲಾಗಿದೆ.

ವಿಡಿಯೋದಲ್ಲಿ ಇರುವ ವ್ಯಕ್ತಿ ನಾನು ಅಲ್ಲ. ಇಂಪರ್ಸೊನೇಷನ್ ಮೂಲಕ ಈ ವಿಡಿಯೋ ಸಿದ್ಧ ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುವುದು ಏನೆಂದರೆ, ಈ ವಿಡಿಯೋದ ಸರ್ಕ್ಯುಲೇಷನ್ ಆಗದಂತೆ ಕ್ರಮಕೈಗೊಳ್ಳಿ. ಅಲ್ಲದೇ, ತಪ್ಪಿತಸ್ಥರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳಿರಿ ಎಂದು ವಿನಂತಿಸಿಕೊಂಡಿದ್ದಾರೆ.

- Advertisement -

Related news

error: Content is protected !!