Wednesday, July 22, 2026
spot_imgspot_img
spot_imgspot_img

ಕೋವಿಡ್‌ಗಿಂತಲೂ ಡೆಡ್ಲಿ ಎಬೋಲಾ ವೈರಸ್‌ ಆತಂಕ – ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸೂಚನೆ

- Advertisement -
- Advertisement -

ಬೆಂಗಳೂರು: ಆಫ್ರಿಕಾದ ಹಲವು ಭಾಗಗಳಲ್ಲಿ ಕೋವಿಡ್‌ಗಿಂತಲೂ ಡೆಡ್ಲಿಯಾದ ಎಬೋಲಾ ವೈರಸ್‌ ಹಾವಳಿ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಕಟ್ಟೆಚ್ಚರಕ್ಕೆ ಆದೇಶ ನೀಡಲಾಗಿದೆ. ಈಗಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಬೋಲಾ ಕುರಿತು ಮಾಹಿತಿ ನೀಡಲಾಗಿದ್ದು, ಹೈ-ರಿಸ್ಕ್‌ ದೇಶಗಳ ಪ್ರಯಾಣಿಕರಿಗೆ ಹಲವು ಸೂಚನೆಗಳನ್ನ ನೀಡಲಾಗಿದೆ.

ಈ ಮಧ್ಯೆ ದೆಹಲಿಯಲ್ಲಿ ನಡೆಯಬೇಕಾಗಿದ್ದ ಭಾರತ-ಆಫ್ರಿಕಾ ಒಕ್ಕೂಟದ ಶೃಂಗಸಭೆಯನ್ನೂ ಮುಂದೂಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಶೃಂಗಸಭೆಯನ್ನು ಮುಂದೂಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಈ ಬೆನ್ನಲ್ಲೇ ಎಲ್ಲಾ ರಾಜ್ಯಗಳು ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ರಾಜ್ಯ ಆರೋಗ್ಯ ಇಲಾಖೆಗೆ ಏನು ಸೂಚನೆ

  1. ಕ್ವಾರಂಟೈನ್ ಸೆಂಟರ್ ಗುರುತು ಮಾಡಿ
  2. ಐಸೂಲೇಷನ್ ಸೌಲಭ್ಯ ಇರುವ ಕ್ವಾರಂಟೈನ್ ಸೆಂಟರ್
  3. ಹೆಲ್ತ್ ಸ್ಕ್ರೀನಿಂಗ್ ಗೆ ಸಿಬ್ಬಂದಿಯನ್ನ ಹೆಚ್ಚಳ ಮಾಡಿಕೊಳ್ಳಿ
  4. ಶಂಕಿತ ಕೇಸ್ ಗಳಿದ್ದರೆ ಆಸ್ಪತ್ರೆಗೆ ರವಾನಿಸಲು ಅಂಬುಲೆನ್ಸ್‌ ನಿಯೋಜಿಸಿ
  5. ಎಬೋಲಾ ಚಿಕಿತ್ಸೆ ಬಗ್ಗೆ ಹೆಲ್ತ್ ವರ್ಕರ್ಸ್ ಅರಿವು ಮೂಡಿಸುವಂತೆ ಸೂಚನೆ

ಎಬೋಲಾ ನಿಯಂತ್ರಣಕ್ಕೆ ಏರ್‌ಪೋರ್‌ಟ್‌ಗಳಿಗೆ ಮಾರ್ಗಸೂಚಿ ಪ್ರಕಟ

ತ್ರಿಬಲ್‌ ಲೇಯರ್‌ ಮಾಸ್ಕ್ ಕಡ್ಡಾಯ, ಹ್ಯಾಂಡ್ ಗ್ಲೌಸ್ ಹಾಕಬೇಕು,. ಸ್ಯಾನಿಟೇಸರ್ ಅನ್ನು ಇಟ್ಟಿಕೊಳ್ಳಬೇಕು, ಎಬೋಲಾ ಶಂಕಿತ ಕೇಸ್ ಪತ್ತೆ ಆದರೆಕೂಡಲೇ ರಿಪೋರ್ಟ್ ಮಾಡಬೇಕು, ಪ್ರಯಾಣಿಕರ ಟ್ರಾವೆಲ್ ಹಿಸ್ಟರಿ ದಾಖಲು ಮಾಡಿಕೊಳ್ಳಬೇಕು. ಸೆಲ್ಪ್ ಡಿಕ್ಲರೇಷನ್ ಫಾರ್ಮ್ ಬರೆದುಕೊಡಬೇಕು. ಎಬೋಲಾ ಬಾಧಿತ ದೇಶಗಳಿಂದ ಬಂದರ ಡಿಟೇಲ್ಸ್ ಜೊತೆಗೆ ಸೆಲ್ಪ್ ಡಿಕ್ಲರೇ ಕಡ್ಡಾಯ.

- Advertisement -

Related news

error: Content is protected !!