- Advertisement -
- Advertisement -
ನವದೆಹಲಿ: ದೇಶಾದ್ಯಂತ ಈದ್ ಹಬ್ಬದ ಸಂಭ್ರಮ ಮನೆಮಾಡಿದೆ. ಈ ಹಿನ್ನಲೆಯಲ್ಲಿ ಮುಸ್ಲಿಂ ಬಾಂಧವರು ಬೆಳಿಗ್ಗೆಯೇ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕೊರೊನಾ ಭೀತಿ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿ ಮಸೀದಿಗೆ ಹೋಗುತ್ತಿರುವ ದೃಶ್ಯ ಕಂಡುಬಂತು.
ದೆಹಲಿಯ ಪತೇಪುರ, ಜಾಮಾ ಮಸೀದಿ, ಅಮೃತಸರದ ಖೈರುದ್ದೀನ್ ಮಸೀದಿ ಸೇರಿದಂತೆ ಹಲವಾರು ಮಸೀದಿಯಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು. ಕರ್ನಾಟಕದ ಕರಾವಳಿ ಭಾಗಗಳಲ್ಲಿ ಶುಕ್ರವಾರ ಈದ್ ಹಬ್ಬ ಆಚರಿಸಲಾಗಿದೆ.
ಇನ್ನು ಈದ್ ಹಬ್ಬ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಬಾಂಧವರಿಗೆ ಶುಭಕೋರಿದ್ದಾರೆ.
ಈದ್ ಅಲ್-ಅಧಾ ಹಬ್ಬದ ಶುಭಾಶಯಗಳು. ನ್ಯಾಯಯುತ, ಸಾಮರಸ್ಯ ಮತ್ತು ಅಂತರ್ಗತ ಸಮಾಜವನ್ನು ರಚಿಸಲು ಈ ದಿನ ಪ್ರೇರಣೆ ನೀಡಲಿ. ಸಹೋದರತ್ವ ಮತ್ತು ಸಹಾನುಭೂತಿಯ ಮನೋಭಾವವನ್ನು ಹೆಚ್ಚಿಸಲಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
- Advertisement -