Wednesday, May 8, 2024
spot_imgspot_img
spot_imgspot_img

ವೈದ್ಯರ ಎಡವಟ್ಟು; ಆರು ವರ್ಷಗಳ ಕಾಲ ಕೋಮಾದಲ್ಲಿದ್ದ ಯುವಕ ಸಾವು..!

- Advertisement -G L Acharya panikkar
- Advertisement -

ಆಸ್ಪತ್ರೆ ವೈದ್ಯರ ಎಡವಟ್ಟಿನಿಂದಾಗಿ ಆರು ವರ್ಷಗಳ ಕಾಲ ಕೋಮಾಕ್ಕೆ ಜಾರಿದ್ದ ಯುವಕ ಇದೀಗ ಮೃತಪಟ್ಟ ವಿಚಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮೃತಪಟ್ಟ ಬಾಲಕ ವಿಘ್ನೇಶ್ (20) ಎಂದು ಗುರುತಿಸಲಾಗಿದೆ.

ಏಪ್ರಿಲ್ 4 ,2017 ರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ , 2024ರ ಜನವರಿ 3 ರಂದು ಮೃತಪಟ್ಟಿದ್ದಾನೆ. ಚಿಕತ್ಸಾ ವೆಚ್ಚ ನೀಡುವುದಾಗಿ ಹೇಳಿ ಕೇವಲ ಐದು ಲಕ್ಷ ರೂಪಾಯಿ ನೀಡಿ ಕೈತೊಳೆದುಕೊಂಡ ವೈದ್ಯರ ವಿರುದ್ಧ ಮೃತ ಯುವಕನ ಪೋಷಕರು ಬೆಂಗಳೂರು ನಗರದ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹರ್ನಿಯಾ ಚಿಕಿತ್ಸೆಗೆಂದು 2017ರ ಏಪ್ರಿಲ್ 4 ರಂದು ವಿಘ್ನೇಶ್​ನನ್ನು ಪೋಷಕರು ಸುಬ್ರಹ್ಮಣ್ಯನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಶಸ್ತ್ರ ಚಿಕಿತ್ಸೆ ಸಮಯದಲ್ಲಿ ವೈದ್ಯರು ಮೂರು ಬಾರಿ ಅನಸ್ತೇಷಿಯ ನೀಡಿದ್ದರು. ಇದರಿಂದಾಗಿ ಪ್ರಜ್ಞೆ ಕಳೆದುಕೊಂಡಿದ್ದ ವಿಘ್ನೇಶ್ ಕೋಮಾಕ್ಕೆ ಜಾರಿದ್ದನು. ಈ ಘಟನೆಯ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ನೀಡಿದ್ದರು.

ಯುವಕನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಎಚ್ಚೆತ್ತ ವೈದ್ಯರು ಚಿಕಿತ್ಸೆ ವೆಚ್ಚ ಭರಿಸೋದಾಗಿ ಹೇಳಿದ್ದರು. ಚಿಕಿತ್ಸೆಗೆಂದು‌ 19 ಲಕ್ಷ ಖರ್ಚು ಮಾಡಲಾಗಿದೆ. ಆದರೆ ಆಸ್ಪತ್ರೆ ಆಡಳಿತ ಮಂಡಳಿ ಐದು ಲಕ್ಷ ನೀಡಿ ಕೈತೊಳೆದುಕೊಂಡಿದೆ. ಉಳಿದ ಚಿಕಿತ್ಸೆ ವೆಚ್ಚ ಕೂಡ ನೀಡದೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಈ ನಡುವೆ ಆರು ವರ್ಷಗಳಿಂದ ಕೋಮಾದಲ್ಲಿದ್ದ ವಿಘ್ನೇಶ್ ಜನವರಿ 3 ರಂದು ಮೃತಪಟ್ಟಿದ್ದು, ಆಸ್ಪತ್ರೆ ವೈದ್ಯರ ಯಡವಟ್ಟು ಸಂಬಂಧ ಮತ್ತೆ ಬನಶಂಕರಿ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!