Monday, May 13, 2024
spot_imgspot_img
spot_imgspot_img

ವೃದ್ಧದಂಪತಿಗಳು ಕಾಲ್ನಡಿಗೆಯಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ

- Advertisement -G L Acharya panikkar
- Advertisement -

ವೃದ್ಧದಂಪತಿಗಳು ಸುಮಾರು 2,150ಕಿ.ಮೀ ಕಾಲ್ನಡಿಗೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಅಚ್ಚರಿ ಮೂಡಿಸಿದ್ದಾರೆ. ಗುಜರಾತ್ ನ ದ್ವಾರಕಾ ನಗರದ ಡಾ.ಆರ್.ಉಪಾಧ್ಯಾಯ (74) ಮತ್ತು ಅವರ ಪತ್ನಿ ಸರೋಜಿನಿ (71) ದಂಪತಿ.
ದಂಪತಿಗಳು ತಮ್ಮ ಇಳಿ ವಯಸ್ಸಿನಲ್ಲೂ ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಪಾದಯಾತ್ರೆ ಕೈಗೊಂಡು ದೇವರ ದರ್ಶನ ಪಡೆಯುವ ಮೂಲಕ ಭಕ್ತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉಪಾಧ್ಯಾಯರ ತಾಯಿ ತಿರುಪತಿಯ ದರ್ಶನವನ್ನು ಮಾಡಬೇಕೆಂಬ ಕನಸನ್ನು ಕಂಡಿದ್ದು ಅದು ನನಸಾಗುವ ಮೊದಲೇ ಅವರು ದೈವಾದೀನರದರು ಆದರೆ ಅತ್ತೆಯ ಹರಕೆ ಅರ್ಥಮಾಡಿಕೊಂಡ ಸೊಸೆ ಸರೋಜಿನಿ ತನ್ನ ಪತಿ ಉಪಾಧ್ಯಾಯರೊಂದಿಗೆ ಕಾಲ್ನಡಿಗೆಯಲ್ಲಿ ಹೋಗಿ ಬಾಲಾಜಿ ದರ್ಶನ ಮಾಡಲು ತೀರ್ಮಾನಿಸಿದರು. ಸ್ವಾಮಿಯ ಸನ್ನಿಧಿ ತಲುಪಲು 59 ದಿನ ಬೇಕಾಯಿತು. ಬಳಿಕ ಕಾಲ್ನಡಿಗೆಯಲ್ಲೇ ಗುಜರಾತ್ ಗೆ ಮರಳಿರುವುದು ವಿಶೇಷ.
ತಿರುಪತಿಗೆ ಹೊರಡುವ ಮುನ್ನ ತನ್ನ ಪತ್ನಿಗೆ ಆರೋಗ್ಯದಲ್ಲಿ ಏರು ಪೇರು ಉಂಟಾದರೂ ದೇವರ ಮೇಲೆ ಭಾರಹಾಕಿ ಯಾತ್ರೆ ಆರಂಭಿಸಿದ್ದು, ಈಗ ಎಲ್ಲವೂ ಸುಗಮವಾಗಿದೆ ಎಂದು ಪತಿ ಉಪಾಧ್ಯಾಯ ಸಂತಸವನ್ನು ವ್ಯಕ್ತಪಡಿಸಿದರು.ಪತ್ನಿ ನಡೆಯಲು ಸಾಧ್ಯವಾಗದೇ ಇದ್ದಾಗ ತಳ್ಳುಗಾಡಿಯ ಮೇಲೆ ಕೂರಿಸಿ ಸ್ವಲ್ಪ ದೂರ ತಳ್ಳುತ್ತಿದ್ದೆ ಎಂದು ಉಪಾಧ್ಯಾಯ ಹೇಳಿದರು.

- Advertisement -

Related news

error: Content is protected !!