- Advertisement -
- Advertisement -



ಕೊಪ್ಪಳ: ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲಿಯೇ ವೃದ್ಧೆ ಮೃತಪಟ್ಟಿರುವ ಘಟನೆ ಕೊಪ್ಪಳದ ಬಿ.ಟಿ ಪಾಟೀಲ್ ನಗರದಲ್ಲಿ ನಡೆದಿದೆ.
ನಜಮುನಿಸಾ ಬೇಗಂ(91) ಮೃತಪಟ್ಟ ವೃದ್ಧೆ. ನಜಮುನಿಸಾ ಬೇಗಂ ಮನೆ ಮುಂದೆ ನಿಂತುಕೊಂಡಿದ್ದ ವೇಳೆ ನಜಮುನಿಸಾ ಬೇಗಂ ಮೇಲೆ ಕೋತಿ ದಾಳಿ ನಡೆಸಿ ತಳ್ಳಿದೆ. ಪರಿಣಾಮ ನಜಮುನಿಸಾ ಬೇಗಂ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ನಜಮುನಿಸಾ ಬೇಗಂ ಅವರನ್ನು ಎಬ್ಬಿಸಲು ಬಂದ ಮಹಿಳೆಯ ಮೇಲೂ ಕೋತಿ ದಾಳಿ ನಡೆಸಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ.
- Advertisement -








