Wednesday, July 2, 2025
spot_imgspot_img
spot_imgspot_img

ವಿದ್ಯುತ್ ರೂಪದಲ್ಲಿ ಬಂದೆರಗಿದ ಜವರಾಯ ಗೃಹಪ್ರವೇಶಕ್ಕೂ ಮೊದಲೇ ಮನೆ ಮಾಲಿಕನ ಮೃತ್ಯು

- Advertisement -
- Advertisement -

ಪುತ್ತೂರು: ಎರಡು ದಿನಗಳ ಬಳಿಕ ಗೃಹಪ್ರವೇಶಗೊಳ್ಳಲಿದ್ದ ತನ್ನ ನೂತನ ಮನೆಯಲ್ಲಿ ವಿದ್ಯುತ್ ಸಂಬಂದಿ ಕೆಲಸದಲ್ಲಿ ನಿರತರಾಗಿದ್ದ ಮನೆ ಯಜಮಾನನಿಗೆ ವಿದ್ಯುತ್ ಶಾಕ್ ತಗಲಿ ಮೃತಪಟ್ಟಧಾರುಣ ಘಟನೆ ಪುತ್ತೂರು ತಾಲೂಕಿನ ಸಂಪ್ಯಎಂಬಲ್ಲಿ ನಡೆದಿದೆ.

ಸಂಪ್ಯದ ಉದಯಗಿರಿ ನಿವಾಸಿ ಕೃಷ್ಣಪ್ಪ ನಾಯ್ಕ್ (45 ) ವಿದ್ಯುತ್ ಶಾಕ್ ಗೆ ಒಳಗಾಗಿ ಮೃತ ಪಟ್ಟ ದುರ್ದೈವಿ. ಮೃತರು ಪತ್ನಿ ಜಯಶ್ರೀ, ಹೆಣ್ಣು ಮಕ್ಕಳಾದ ಸಿಂಚನಾ ಹಾಗೂ ಸ್ಪಂದನಾರವರನ್ನು ಅಗಲಿದ್ದಾರೆ. ಮೃತರು ಪುತ್ತೂರಿನ ಪರ್ಲಡ್ಕ ಬೈಪಾಸು ಬಳಿ ಜೀಪ್ ಮೆಕ್ಯಾನಿಕ್ ಆಗಿದ್ದರು.

ಪುತ್ತೂರಿನ ಸಂಪ್ಯದ ಉದಯಗಿರಿ ಎಂಬಲ್ಲಿ ಕೃಷ್ಣಪ್ಪ ನಾಯ್ಕರವರು ನೂತನವಾಗಿ ಮನೆ ಕಟ್ಟಿಸಿದ್ದು ಅದರ ಗೃಹಪ್ರವೇಶ ಮುಂದಿನ ಶನಿವಾರ (ಜ 16 ) ನಿಗದಿಯಾಗಿತ್ತು. ಬುಧವಾರ ರಾತ್ರಿ ಗೃಹಪ್ರವೇಶದ ಆರಂಭದ ಶಾಸ್ತ್ರವಾದ ಕುಟ್ಟಿ ಪೂಜೆ ನೆರವೇರಿತ್ತು. ಗುರುವಾರ ಸಂಜೆ ಮೂರು ಗಂಟೆ ಸುಮಾರಿಗೆ ಹೊಸ ಮನೆಯಲ್ಲಿ ಕೃಷ್ಣಪ್ಪ ನಾಯ್ಕ್ ರವರು ಪ್ಲಗ್ ಸಿಕ್ಕಿಸುವ ಕಾರ್ಯದಲ್ಲಿ ನಿರತರಾಗಿದ್ದಾಗ ಅವರಿಗೆ ವಿದ್ಯುತ್ ಶಾಕ್ ತಗುಲಿದೆ.

- Advertisement -

Related news

error: Content is protected !!