Saturday, July 5, 2025
spot_imgspot_img
spot_imgspot_img

ಬ್ರಿಟನ್ ರಾಣಿ ಎಲಿಜಬೆತ್ ನಿಧನ

- Advertisement -
- Advertisement -
astr

ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಬ್ರಿಟನ್​ನ ರಾಣಿ ಎರಡನೇ ಎಲಿಜಬೆತ್​ ಅವರು ಸೆಪ್ಟೆಂಬರ್ 8 ರಂದು ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ಅವರ ನಿಧನ ವಾರ್ತೆಯನ್ನು ಬಂಕಿಂಗ್ ಹ್ಯಾಮ್ ಅರಮನೆಯವರು ಖಚಿತಪಡಿಸಿದ್ದಾರೆ.

ಬ್ರಿಟನ್​ನ ಅನ್ನು ಎರಡನೇ ಎಲಿಜಬೆತ್​ ಅವರು ಏಳು ದಶಕಗಳ ಕಾಲ ಆಳಿದ್ದರು ಅನ್ನೋದು ವಿಶೇಷ. ಎಲಿಜಬೆತ್ ಅವರು 1952ರಲ್ಲಿ ಈ ಪಟ್ಟಕ್ಕೆ ಏರಿದರು. ತಂದೆ ಕಿಂಗ್ ಜಾರ್ಜ್​ VI ನಿಧನದ ನಂತರದಲ್ಲಿ ಅವರಿಗೆ ಅಧಿಕಾರ ಸಿಕ್ಕಿತು. ನಂತರ 70 ವರ್ಷಗಳ ಕಾಲ ಎಲಿಜಬೆತ್ ಈ ಸ್ಥಾನದಲ್ಲಿದ್ದರು.

ಗುರುವಾರ ಎಲಿಜಬೆತ್ ಅವರ ಆರೋಗ್ಯ ತೀವ್ರಗತಿಯಲ್ಲಿ ಹದಗೆಟ್ಟಿತ್ತು. ಅವರನ್ನು ಬ್ರಿಟನ್‌ನ ಬಲ್‌ಮೋರಾಲ್‌ನಲ್ಲಿ ವೈದ್ಯರ ತಂಡ ಸೂಕ್ತ ಚಿಕಿತ್ಸೆ ನೀಡಿತ್ತು. ಆದರೆ, ವೈದ್ಯರ ಚಿಕಿತ್ಸೆ ಫಲಿಸಲಿಲ್ಲ. ಅವರ ನಿಧನ ವಾರ್ತೆಯನ್ನು ಬಂಕಿಂಗ್ ಹ್ಯಾಮ್ ಅರಮನೆ ಪ್ರಕಟಿಸುತ್ತಿದ್ದಂತೆ ಬ್ರಿಟನ್​ನಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ದೇಶದ ಗಣ್ಯರು ಎಲಿಜಬೇತ್ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

ಎರಡನೇ ಎಲಿಜಬೆತ್ ಅವರು ಬುಧವಾರ ಕೆಲ ಸಭೆಗಳಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಅವರ ದೇಹ ಇದಕ್ಕೆ ಸ್ಪಂದಿಸಲಿಲ್ಲ. ವೈದ್ಯರ ಸೂಚನೆಯಂತೆ ಅವರು ವಿಶ್ರಾಂತಿ ಪಡೆದಿದ್ದರು. ಆದರೆ, ಗುರುವಾರ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ.

- Advertisement -

Related news

error: Content is protected !!