Friday, June 5, 2026
spot_imgspot_img
spot_imgspot_img

ದೀಪಾವಳಿ ಬೋನಸ್​ ಕೊಡೋದಿಲ್ಲ ಎಂದಿದ್ದಕ್ಕೆ ಢಾಬಾ ಮಾಲೀಕನ ಕೊಂದು ಕಾರಿನೊಂದಿಗೆ ಪರಾರಿಯಾದ ನೌಕರರು

- Advertisement -
- Advertisement -

ದೀಪಾವಳಿ ಬೋನಸ್​ ಕೊಡುವುದಿಲ್ಲ ಎಂದಿದ್ದಕ್ಕೆ ಢಾಬಾ ಮಾಲೀಕನನ್ನು ಇಬ್ಬರು ಕೆಲಸಗಾರರು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಹತ್ಯೆ ಮಾಡಿ ಬಳಿಕ ಮಾಲೀಕರ ಕಾರು ಕದ್ದು ಪರಾರಿಯಾಗಿದ್ದಾರೆ. ನಾಗಪುರ ಗ್ರಾಮಾಂತರ ಪೊಲೀಸ್ ವ್ಯಾಪ್ತಿಯ ಕುಹಿ ಫಾಟಾ ಬಳಿಯ ಢಾಬಾದಲ್ಲಿ ದೀಪಾವಳಿ ಬೋನಸ್‌ಗಾಗಿ ಕಾರ್ಮಿಕರು ಬೇಡಿಕೆ ಇಟ್ಟಿದ್ದರು, ಆದರೆ ಮಾಲೀಕ ಅದನ್ನು ನಿರಾಕರಿಸಿದ್ದರು, ಕೋಪಗೊಂಡ ಇಬ್ಬರು ಕೆಲಸಗಾರರು ಮಾಲೀಕನನ್ನು ಕತ್ತುಹಿಸುಕಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

- Advertisement -

Related news

error: Content is protected !!