Wednesday, August 26, 2026
spot_imgspot_img
spot_imgspot_img

ಕೇರಳ ಎರ್ನಾಕುಲಂ ಸ್ಫೋಟ ಪ್ರಕರಣ; ಬಾಂಬ್ ಇಟ್ಟಿದ್ದು ನಾನೇ ಎಂದು ಪೊಲೀಸರಿಗೆ ಶರಣಾದ ವ್ಯಕ್ತಿ…!

- Advertisement -
- Advertisement -

ಕೇರಳದ ಕಳಮಶ್ಶೇರಿ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಓರ್ವ ವ್ಯಕ್ತಿ ಸ್ವತಃ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ತ್ರಿಶ್ಶೂರ್ ಜಿಲ್ಲೆಯ ಕೊಡಕ್ಕರ ಠಾಣೆಯ ಪೊಲೀಸರ ಮುಂದೆ ಕೊಚ್ಚಿ ನಿವಾಸಿ ಶರಣಾಗಿದ್ದಾನೆ. ಬ್ಲಾಸ್ಟ್ ಬಳಿಕ ಇಂದು ಮಧ್ಯಾಹ್ನ 1.30ರ ವೇಳೆಗೆ ಪೊಲೀಸ್ ಠಾಣೆಗೆ ಬಂದಿದ್ದ ವ್ಯಕ್ತಿ, ಬಾಂಬ್ ಇಟ್ಟಿದ್ದು ನಾನೇ ಎಂದು ಬಾಯ್ಬಿಟ್ಟಿದ್ದಾನೆ. ಸದ್ಯ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆತ ನೀಡಿರುವ ಹೇಳಿಕೆಯನ್ನು ಆಧರಿಸಿ ಅಜ್ಞಾತ ಸ್ಥಳದಲ್ಲಿಟ್ಟು ತನಿಖೆ ನಡೆಸುತ್ತಿದ್ದಾರೆ.

ಇಂದು ಬೆಳಗ್ಗೆ ಪ್ರಾರ್ಥನಾ ಮಂದಿರದಲ್ಲಿ ಸುಮಾರು 2,500 ಮಂದಿ ಜಮಾಯಿಸಿದ್ದರು. ಈ ವೇಳೆ ಭಾರೀ ಸ್ಫೋಟವಾಗಿದೆ. ಈ ಸ್ಫೋಟಕ್ಕೂ ಮುನ್ನ ನೀಲಿ ಬಣ್ಣದ ಕಾರೊಂದು ಹೊರಟಿರುವುದು ಸಿಸಿಟಿವಿ ಪರಿಶೀಲನೆಯ ವೇಳೆ ಬಯಲಾಗಿದೆ. ಕನ್ವೆನ್ಷನ್ ಸೆಂಟರ್ ನಿಂದ ವೇಗವಾಗಿ ಕಾರು ಹೊರಟಿತ್ತು. ಸದ್ಯ ಕಾರು ಸಾಗುತ್ತಿರುವ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿದ ಪೊಲೀಸರು, ಕಾರು ಪತ್ತೆಹಚ್ಚಲು ಮುಂದಾಗಿದ್ದಾರೆ.

- Advertisement -

Related news

error: Content is protected !!