



ಎರುಂಬು: ಶ್ರೀ ವಿಷ್ಣುಮೂರ್ತಿ (ಮಂಗಲ) ದೇವಸ್ಥಾನದಲ್ಲಿ ಸಿಂಹಮಾಸದ ವಾರ್ಷಿಕ ಧಾರ್ಮಿಕ ಕಾರ್ಯಕ್ರಮ ಆ.23-8-2025ನೇ ಶನಿವಾರದಿಂದ 13-9-2025ನೇ ಶನಿವಾರದವರೆಗೆ ನಡೆಯಲಿದೆ.
ದಿನಾಂಕ:23-08-2025ನೇ ಶನಿವಾರ ಪೂರ್ವಾಹ್ನ ಶ್ರೀ ವಿಷ್ಣುಸಹಸ್ರನಾಮಾರ್ಚನೆ, ನಾಗತಂಬಿಲ, ಬಲಿವಾಡುಕೂಟ, ಅನ್ನಸಂತರ್ಪಣೆ ನಡೆಯಲಿದೆ. 11:00 ರಿಂದ 12:30 : ಶ್ರೀ ವಿಷ್ಣುಸಹಸ್ರನಾಮಾರ್ಚನೆ ನಡೆದು ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ನಡೆಯಲಿದೆ.
ದಿನಾಂಕ:30-08-2025ನೇ ಶನಿವಾರ ಸಂಜೆ 6:00 ರಿಂದ 7.00ರ ವರೆಗೆ ಶ್ರೀ ಹಿಂದೂ ಸಾಮಂತ ಅರಸು ಬಲ್ಲಾಳ ಸಮಾಜ ಸೇವಾ ಸಂಘ ರಿ. ಇವರಿಂದ ಭಜನೆ ನಡೆದು ಬಳಿಕ ರಾತ್ರಿ 7.00 ರಿಂದ ಶ್ರೀ ದೇವರಿಗೆ ರಂಗಪೂಜೆ ನಡೆಯಲಿದೆ.

ದಿನಾಂಕ:6-9-2025ನೇ ಶನಿವಾರ ಸಂಜೆ ಗಂಟೆ 6.00 ರಿಂದ 7.00ರ ವರೆಗೆ ಶ್ರೀ ಕಾರ್ತಿಕೇಯ ಭಜನಾ ತಂಡ, ನೆಕ್ಕಿತಪುಣಿ ಇವರಿಂದ ಭಜನೆ ನಡೆದು ಬಳಿಕ ರಾತ್ರಿ 7.00 ರಿಂದ ಶ್ರೀ ದೇವರಿಗೆ ರಂಗಪೂಜೆ ನಡೆಯಲಿದೆ.
ದಿನಾಂಕ:13-09-2025ನೇ ಶನಿವಾರ ಸಂಜೆ 6.00 ರಿಂದ 7.00ರ ವರೆಗೆ ಶ್ರೀ ಅಯ್ಯಪ್ಪ ಭಜನಾ ಮಂಡಳಿ, ಮುಳಿಯ ಇವರಿದ ಭಜನೆ ನಡೆದು ಬಳಿಕ ರಾತ್ರಿ 7.00 ರಿಂದ ಶ್ರೀ ದೇವರಿಗೆ ನಡೆಯಲಿದೆ.








