Thursday, April 25, 2024
spot_imgspot_img
spot_imgspot_img

ಕಲ್ಲಡ್ಕ: ಕರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರೊಂದಿಗೆ ರಕ್ಷಾಬಂಧನ

- Advertisement -G L Acharya panikkar
- Advertisement -

ಕಲ್ಲಡ್ಕ: ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ “ಆಶಾ ಬಂಧುಗಳೊಂದಿಗೆ ರಕ್ಷೆಯ ಬಂಧುತ್ವ’ ಎನ್ನುವ ವಿಶೇಷ ಕಾರ್ಯಕ್ರಮ ದಿನಾಂಕ 12. 8 .2022 ರಂದು ಆಚರಿಸಲಾಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡುತ್ತಾ “ಕೊರೋನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿ ಸಮಾಜದ ಆರೋಗ್ಯ ರಕ್ಷಣೆಯಲ್ಲಿ ಮುಂದಾಳತ್ವ ವಹಿಸಿದ ಕಾರ್ಯಕರ್ತೆಯರ ಕಾರ್ಯ ನಿಜವಾಗಿಯೂ ಶ್ಲಾಘನೀಯ. ರಕ್ಷೆ ಎನ್ನುವುದು ಇಡೀ ಸಮಾಜದ ರಕ್ಷಣೆ ಹಾಗೂ ಬಂಧುತ್ವದ ಸಂಕೇತ. ಮೌಲ್ಯವನ್ನು ಹೇಳಿಕೊಡುವವಳು ತಾಯಿ. ಯಾರಿಂದ ಸಹಕಾರ ಪಡೆಯುತ್ತೇವೆಯೋ ಅವರೆಲ್ಲರೂ ತಾಯಿ ಸಮಾನ. ಭೂಮಿಯನ್ನು ಮಾತೃಭೂಮಿ ಎಂದು , ನದಿಗೆ ತಾಯಿಯ ಹೆಸರು ,ಗೋವಿಗೆ ಗೋಮಾತೆ, ಹೀಗೆ ಯಾವುದೆಲ್ಲವೂ ನಮಗೆ ಉಪಕಾರ ಮಾಡಿದೆಯೋ ಅದೆಲ್ಲವೂ ಕೂಡ ತಾಯಿಯ ರೂಪವಾಗಿದೆ. ಹಾಗಾಗಿ ಸೇವೆಗೆ ಇನ್ನೊಂದು ಹೆಸರೇ ತಾಯಿ, ಸಂಸ್ಕೃತಿಗೆ ಚಿಂತನೆಗೆ ಇನ್ನೊಂದು ಹೆಸರೇ ತಾಯಿ. ತಾಯಿಯ ರಕ್ಷಣೆ ಮಾಡಿದರೆ ಅದು ಎಲ್ಲವುದರ ಸಂರಕ್ಷಣೆಯಂತೆ. ಸಂಘಟನೆಯ ಪ್ರತೀಕವೇ ರಕ್ಷೆ. ನಾವೆಲ್ಲರೂ ಒಟ್ಟಾಗಿ ದೇಶದ ರಕ್ಷಣೆ ಮಾಡೋಣ. ಈ ದೇಶವನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯೋಣ” ಎಂದರು.

ಕಾರ್ಯಕ್ರಮದ ಮೊದಲಿಗೆ ಭಾರತ ಮಾತೆಗೆ ದೀಪ ಪ್ರಜ್ವಲನೆ ಮಾಡಿ ಪುಷ್ಪಾರ್ಚನೆ ಮಾಡಿದರು. ನಂತರ ವಿದ್ಯಾರ್ಥಿಗಳಿಂದ ಅತಿಥಿಗಳಿಗೆ ರಕ್ಷಾಧಾರಣೆ ನಡೆಯಿತು. ಕರೋನ ಸಂದರ್ಭದಲ್ಲಿ ಜೀವ ಭಯವನ್ನು ತೊರೆದು ಇತರರ ಪ್ರಾಣವನ್ನು ರಕ್ಷಿಸಲು ಸ್ವಾರ್ಥ ಚಿಂತನೆ ಇಲ್ಲದೆ ತಮ್ಮನ್ನು ತಾವು ಉದಾತ್ತ ಕಾರ್ಯದಲ್ಲಿ ತೊಡಗಿಸಿಕೊಂಡ ಕರೋನ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರಿಗೆ ಮಡಿಲು ತುಂಬಿಸಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.ನಂತರ 7ನೇ ತರಗತಿಯ ವಿದ್ಯಾರ್ಥಿಗಳು ಪ್ರೇರಣಗೀತೆ ಹಾಡಿದರು.

ವೇದಿಕೆಯಲ್ಲಿ ರಾಷ್ಟ್ರ ಸೇವಿಕ ಸಮಿತಿಯ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಡಾ| ಕಮಲಾ ಪ್ರಭಾಕರ್ ಭಟ್, ಶ್ರೀರಾಮ ವಿದ್ಯಾ ಕೇಂದ್ರದ ಆಡಳಿತ ಮಂಡಳಿಯ ಸದಸ್ಯೆ ಲಕ್ಷ್ಮೀ ರಘುರಾಜ್, ಆಶಾ ಕಾರ್ಯಕರ್ತೆರಾದ ಮಂಗಿಲಪದವಿನ ಶಶಿಕಲಾ, ಸಜೀಪ ನಡುವಿನ ಆಶಾ, ಸುರಿಬೈಲಿನ ಭಾರತಿ, ಕಡೇಶಿವಾಲಯದ ಸರೋಜಾ, ಪಜೀರಿನ ಜಯಶ್ರೀ, ವಿಟ್ಲಮುಡ್ನೂರಿನ ಉಮಾವತಿ ಶೆಟ್ಟಿ ಮತ್ತು ಶ್ಯಾಮಲಾ, ಶಂಭೂರಿನ ಪ್ರಮೀಳಾ, ಜಾರಂದಗುಡ್ಡೆಯ ಪ್ರತಿಮಾ, ಮಂಚಿಯ ನಳಿನಿ ಕಾಮತ್ ಮತ್ತು ಪುಷ್ಪಲತಾ, ಬಾಳ್ತಿಲ ಗ್ರಾಮದ ಸುಶೀಲಾ, ರೇವತಿ, ಜಯಶ್ರೀ, ನೇತ್ರಾವತಿ, ಸುಜಾತ, ಅಡ್ಯಾರಿನ ರಮಣಿ, ಕೊಳ್ನಾಡಿನ ಗೀತಾ, ವಿಶಾಲಾಕ್ಷಿ, ವೀರಕಂಭದ ಸುನಿತಾ, ಅಮ್ಟೂರಿನ ಬಬಿತಾ, ಪಡೀಲಿನ ಮಾಲತಿ, ಪಾಣೆಮಂಗಳೂರಿನ ಜ್ಯೋತಿಲಕ್ಷ್ಮೀ, ಹೇಮಲತಾ ಮತ್ತು ಶೋಭಾ, ನೆಟ್ಲಮುಡ್ನೂರಿನ ಸುಮಲತಾ, ಸುಜಾತ ನರಿಕೊಂಬು, ವೇದಾವತಿ ಇರಾ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಭೂಮಿಕಾ ಸ್ವಾಗತಿಸಿ ಶ್ರೀವತ್ಸ ನಿರೂಪಿಸಿ ಚಿನ್ಮಯಿ ವಂದಿಸಿದರು.

- Advertisement -

Related news

error: Content is protected !!