Sunday, August 2, 2026
spot_imgspot_img
spot_imgspot_img

ವಿಟ್ಲ: ಎರುಂಬುದ ಮಾಣಿಕ್ಯೋಲು ತುಳು ವೀಡಿಯೋ ಭಕ್ತಿಗೀತೆ ಬಿಡುಗಡೆ

- Advertisement -
- Advertisement -
driving

ವಿಟ್ಲ: ಪುಣ್ಯಕ್ಷೇತ್ರದಲ್ಲಿ ಒಂದಾಗಿರುವ ಶಂಕರ ನಾರಾಯಣ ದೇವಸ್ಥಾನ ಎರುಂಬು ಇದರ ಕಾರ್ಣಿಕ ಸಾರುವ ವಿಶೇಷ ಭಕ್ತಿಗೀತೆ ಎರುಂಬುದ ಮಾಣಿಕ್ಯೋಲು ಎಂಬ ತುಳು ವೀಡಿಯೋ ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಎರುಂಬು ಶ್ರೀ ಶಂಕರ ನಾರಾಯಣ ಸನ್ನಿಧಿಯಲ್ಲಿ ನೆರವೇರಿತು.

ಮಾ.ಆದಿತ್ಯ, ಅಶ್ವಿನಿ ಶ್ರೇಯಾ ವಿಟ್ಲ, ನಿತ್ಯಶ್ರೀ, ಜ್ಞಾನಶ್ರೀ, ಆದ್ಯಶ್ರೀ ಇವರ ಸ್ವರ ಕಂಠದಲ್ಲಿ ಮೂಡಿಬಂದಿದೆ. ಗೀತಾ ಚಂದು ಪೂಜಾರಿ ಎರುಂಬುರವರ ಶುಭಾಶೀರ್ವಾದದಲ್ಲಿ ಕೀರ್ತನಾ ಕ್ರಿಯೇಷನ್ಸ್ ಅರ್ಪಿಸುವ ಮಮತಾ ಹರೀಶ್ ಪೂಜಾರಿ ಎರುಂಬು ಇವರ ನಿರ್ಮಾಣದಲ್ಲಿ ಎರುಂಬುದ ಮಾಣಿಕ್ಯೊಲು ತುಳು ವಿಡಿಯೋ ಭಕ್ತಿಗೀತೆ ಅದ್ಭುತವಾಗಿ ಮೂಡಿಬಂದಿದೆ.

ಎರುಂಬುದ ಮಾಣಿಕ್ಯೋಲು ಭಕ್ತಿಗೀತೆಯಯನ್ನು ದೇವಸ್ಥಾನ ಆಡಳಿತ ಸಮಿತಿಯ ಸಂಕಪ್ಪ ಶೇಖರ್, ಕೃಷ್ಣಯ್ಯ ಬಳ್ಳಾಲ್ ವಿಟ್ಲ ಅರಮನೆ, ಅರ್ಚಕರಾದ ನರಸಿಂಹ ಸೇರಿದಂತೆ ಮೊದಲಾದವರು ಜೊತೆಗಿದ್ದು ಬಿಡುಗಡೆಗೊಳಿಸಿದರು.

ಅಂತೆಯೇ ಸುಂದರವಾಗಿ ಹಾಡಿದ ಮಾ. ಆದಿತ್ಯ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಹಾಡಿಗೆ ಪ್ರವೀಣ್ ಜಯ ವಿಟ್ಲರವರು ಸಾಹಿತ್ಯ ಬರೆದು, ನಿರ್ದೇಶನ ಮಾಡಿದ್ದಾರೆ. ತೃಷಾ ಸ್ಟುಡಿಯೋ ಚಂದಳಿಕೆ ಮಾಲೀಕ ಸುರೇಶ್ ದೇವಸ್ಯ ವಿಟ್ಲರವರು ಛಾಯಾಗ್ರಣ ಮಾಡಿದ್ದಾರೆ.

ಈ ಕಾರ್ಯಕ್ರಮದ ನಂತರ ಪ್ರವೀಣ್ ಜಯ ವಿಟ್ಲ ಬಳಗದಿಂದ ಭಕ್ತಿ ಸ್ವರಾಂಜಲಿ ಸಂಗೀತ ಕಾರ್ಯಕ್ರಮ ನಡೆಯಿತು. ಅಶ್ವಿನಿ ಶ್ರೇಯಾ ವಿಟ್ಲ, ಹರ್ಷಿತ್ ವಿಟ್ಲ, ಹನ್ವಿಕಾ ವಿಟ್ಲ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಅನಿತ್ವಾ ವಿಟ್ಲ ಅವರ ಸ್ಯಾಕ್ಸೋಫೋನ್ ವಾದನ ಎಲ್ಲರ ಮನ ತಣಿಸಿತು.

ಎರುಂಬುದ ಮಾಣಿಕ್ಯೊಲು ಭಕ್ತಿಗೀತೆ ಹಾಡಿಗೆ ಎಲ್ಲೆಡೆ ಮೆಚ್ಚುhttps://youtu.be/dHm4DYHa8-Uಗೆ ವ್ಯಕ್ತವಾಗುತ್ತಿದೆ. ಕೀರ್ತನ್ ಕ್ರಿಯೇಶನ್ಸ್ ನ ಕನಸಿನ ಕೂಸು ಇದಾಗಿದ್ದು ಇವರ ಈ ತಂಡದಿಂದ ಇನ್ನಷ್ಟು ಹೊಸ ಹೊಸ ಭಕ್ತಿಗೀತೆಗಳು ಮೂಡಿ ಬರಲಿ. ಎರುಂಬು ಶ್ರೀ ಶಂಕರ ನಾರಾಯಣ ದೇವರ ಕೃಪೆ ಸದಾ ಇರಲಿ.

driving
- Advertisement -

Related news

error: Content is protected !!