ಈಶ್ವರಮಂಗಲ: ಮೆಡಿಕಲ್ ಅಂಗಡಿಗೆ ನುಗ್ಗಿ ಕಾಮುಕನೋರ್ವ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆಗೆ ಸಂಬ0ಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಶ್ವರ ಮಂಗಲ ಪೇಟೆಯಲ್ಲಿರುವ ಮೆಡಿಕಲ್ ಶಾಪ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬAಧಿಸಿ ಆರೋಪಿ ಇಬ್ರಾಹಿಂ ಕುಕ್ಕಾಜೆಯನ್ನು ಬಂಧಿಸಲಾಗಿದೆ.
ಇಂದು ಮುಂಜಾನೆ ಮೆಡಿಕಲ್ಗೆ ಬಂದ ಇಬ್ರಾಹಿಂ ಕುಕ್ಕಾಜೆ ಯುವತಿಯ ಬಳಿ ನನ್ನ ಕಾಲನ್ನು ಒಮ್ಮೆ ನೋಡು ಎಂದಿದ್ದಾನೆ. ಏನಾಗಿದೆ ಎಂದು ನೋಡಲು ಮೆಡಿಕಲ್ ಶಾಪ್ನ ಒಳಗಡೆ ಪ್ರವೇಶಿಸುವ ಬಾಗಿಲು ತಡೆ ಹಲಗೆಯನ್ನು ಮೇಲಕ್ಕೆ ಎತ್ತಿದಾಗ ಇಬ್ರಾಹಿಂ ಒಮ್ಮೆಲೆ ಮೆಡಿಕಲ್ ಶಾಪ್ನ ಒಳಭಾಗದ ಕೊಠಡಿಗೆ ಅಕ್ರಮ ಪ್ರವೇಶಿಸಿದ್ದಾನೆ. ನಂತರ ಯುವತಿಯ ಅಸಭ್ಯವಾಗಿ ವರ್ತಿಸಿ ಬಟ್ಟೆ ಎಳೆಯಲು ಮುಂದಾಗಿದ್ದಾನೆ. ಇದರಿಂದ ಭಯಗೊಂಡ ಯುವತಿ ಕಿರುಚಿದ್ದಾಳೆ. ಅಲ್ಲೇ ನಿಂತಿದ್ದ ಸಾರ್ವಜನಿಕರು ಯುವತಿಯ ರಕ್ಷಣೆಗೆ ಮುಂದಾಗಿದ್ದಾರೆ.
ಈ ಬಗ್ಗೆ ಇಬ್ರಾಹಿಂ ಕುಕ್ಕಾಜೆ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.