Friday, July 24, 2026
spot_imgspot_img
spot_imgspot_img

12ನೇ ತರಗತಿ ಮಾಥ್ಸ್ ಪ್ರಶ್ನೆಪತ್ರಿಕೆಯಲ್ಲಿ ‘ರಿಕ್‌ರೋಲ್” QR ಕೋಡ್ : ಸ್ಪಷ್ಟನೆ ನೀಡಿದ ಸಿಬಿಎಸ್ಇ

- Advertisement -
- Advertisement -

ಹೊಸದಿಲ್ಲಿ : ಸಿಬಿಎಸ್‌ಇ 12ನೇ ತರಗತಿ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ “ರಿಕ್ ರೋಲ್’ ‘ (Rickroll) QR ಕೋಡ್ ಇರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವೈರಲ್ ಬೆನ್ನಲ್ಲೆ ಸಿಬಿಎಸ್‌ಇ ಸ್ಪಷ್ಟನೆ ನೀಡಿದೆ.

ಪ್ರಶ್ನೆಪತ್ರಿಕೆಯಲ್ಲಿ QR ಕೋಡ್ ಸ್ಕ್ಯಾನ್ ಮಾಡಿದಾಗ ಅದು Never Gonna Give You Up ಎಂಬ ಪ್ರಸಿದ್ಧ ಹಾಡಿನ ವೀಡಿಯೊಗೆ ಹೋಗುತ್ತಿರುವುದು ಕಂಡುಬಂದಿದೆ. ಈ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಪ್ರಶ್ನೆಪತ್ರಿಕೆಗಳ ಸುರಕ್ಷತೆ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಪ್ರಶ್ನೆಗಳು ಮೂಡಿದೆ.ಈ ಕುರಿತು ಪ್ರತಿಕ್ರಿಯಿಸಿದ ಸಿಬಿಎಸ್‌ಇ, ಬೋರ್ಡ್ ಪ್ರಶ್ನೆಪತ್ರಿಕೆಯಲ್ಲಿ ಹಲವು ಭದ್ರತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದೆ.

ಅವುಗಳಲ್ಲಿ QR ಕೋಡ್‌ಗಳೂ ಸೇರಿದ್ದು ಯಾವುದೇ ರೀತಿಯ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಅನುಮಾನಾಸ್ಪದ ಸಂದರ್ಭಗಳಲ್ಲಿ ಅದನ್ನು ಸ್ಕ್ಯಾನ್ ಮಾಡಿ ಪತ್ರಿಕೆಯ ಪ್ರಾಮಾಣಿಕತೆಯನ್ನು ಪರಿಶೀಲಿಸಲು ಅವುಗಳನ್ನು ಬಳಸಲಾಗುತ್ತದೆ ಎಂದು ತಿಳಿಸಿದೆ.ಕೆಲವು ಪ್ರಶ್ನೆ ಪತ್ರಿಕೆಗಳ ಸೆಟ್‌ಗಳಲ್ಲಿ, QR ಕೋಡ್‌ಗಳನ್ನು ಸ್ಕ್ಯಾನ್ ಮಾಡುವಾಗ YouTube ವೀಡಿಯೊಗೆ ಲಿಂಕ್ ಆಗಿರುವುದು ಕಂಡುಬಂದಿದೆ ಎಂದು ಮಂಡಳಿ ಒಪ್ಪಿಕೊಂಡಿದೆ. ಆದರೆ ಈ ಸಮಸ್ಯೆಯು ಪ್ರಶ್ನೆ ಪತ್ರಿಕೆಗಳ ಪಾರದರ್ಶಕತೆ ಮೇಲೆ ಪರಿಣಾಮ ಬೀರುವುದಿಲ್ಲ. ಪ್ರಶ್ನೆ ಪತ್ರಿಕೆಗಳು ನಿಜವಾದವು. ಪ್ರಶ್ನೆ ಪತ್ರಿಕೆಗಳ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಸಿಬಿಎಸ್‌ಇ ಹೇಳಿದೆ.

- Advertisement -

Related news

error: Content is protected !!