




ಇಂದೋರ್ : ಇವಿ ಚಾರ್ಜಿಂಗ್ ಪಾಯಿಂಟ್ನಲ್ಲಿ ಸ್ಫೋಟ ಸಂಭವಿಸಿ ಮನೆ ಹೊತ್ತಿ ಉರಿದು ಒಂದೇ ಕುಟುಂಬದ ಎಂಟು ಮಂದಿ ಸಜೀವ ದಹನವಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ತನ್ಮಯ್(6), ರಾಶಿ ಸೇರಿಯಾ(12), ಸಿಮ್ರಾನ್(30), ಟಿನು(35), ಸುಮನ್ ಸೇರಿಯಾ(60), ವಿಜಯ್ ಸೇರಿಯಾ(65), ಛೋಟು ಸೇರಿಯಾ(22) ಮತ್ತು ಮನೋಜ್(65) ಮೃತಪಟ್ಟವರು.
ಬ್ರಜೇಶ್ವರಿ ಅನೆಕ್ಸ್ ಕಾಲನಿಯಲ್ಲಿರುವ ಮನೆಯಲ್ಲಿ ಇಂದು(ಮಾ.18) ಮುಂಜಾನೆ 3.30 ರಿಂದ 4.30ರ ನಡುವೆ ಈ ದುರಂತ ಸಂಭವಿಸಿದ್ದು, ಮೂರು ಅಂತಸ್ತಿನ ಮನೆಯ ಹೊರಗಡೆ ಕಾರನ್ನು ಜಾರ್ಜ್ ಮಾಡಲಾಗುತ್ತಿದ್ದ ವೇಳೆ ಚಾರ್ಜಿಂಗ್ ಪಾಯಿಂಟ್ನಲ್ಲಿ ಸ್ಪೋಟ ಸಂಭವಿಸಿದ್ದು, ಬಳಿಕ ಬೆಂಕಿ ಮನೆಗೆ ಆವರಿಸಿದೆ.
ಮನೆಯ ಬಾಗಿಲುಗಳನ್ನು ಲಾಕ್ ಮಾಡಿದ್ದರಿಂದ ಪೊಲೀಸರಿಗೆ ಒಳಗೆ ಪ್ರವೇಶಿಸುವುದು ಕಷ್ಟಕರವಾಗಿ ಪರಿಣಮಿಸಿತ್ತು. ಮನೆಯೊಳಗಿನ ಅಡುಗೆ ಅನಿಲ ಸಿಲಿಂಡರ್ಗಳು ಸ್ಪೋಟಗೊಂಡಿರುವುದು ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು.
ಘಟನೆಯಲ್ಲಿ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದು, ಮನೆಯೊಳಗೆ ಸಿಲುಕಿದ್ದ ಮೂವರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಆರು ಅಗ್ನಿಶಾಮಕ ದಳದ ವಾಹನಗಳ ಮೂಲಕ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯಿತು ಎಂದು ವರದಿ ಮೂಲಕ ತಿಳಿದುಬಂದಿದೆ.







