Sunday, May 5, 2024
spot_imgspot_img
spot_imgspot_img

ನಿಂತಿದ್ದ ಪ್ಯಾಸೆಂಜರ್ ರೈಲಿಗೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ; 6 ಮಂದಿ ಸಾವು

- Advertisement -G L Acharya panikkar
- Advertisement -

ಎಕ್ಸ್‌ಪ್ರೆಸ್‌ ರೈಲೊಂದು ನಿಂತಿದ್ದ ಪ್ಯಾಸೆಂಜರ್‌ ರೈಲಿಗೆ ಡಿಕ್ಕಿ ಹೊಡೆದು 6 ಮಂದಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಒಡಿಶಾದಲ್ಲಿ 280 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಭೀಕರ ಮೂರು ರೈಲುಗಳ ಅಪಘಾತವಾಗಿ ತಿಂಗಳುಗಳು ಕಳೆದ ನಂತರ ಆಂಧ್ರದಲ್ಲಿ ಈ ಅವಘಡ ಸಂಭವಿಸಿದೆ.

ಪ್ಯಾಸೆಂಜರ್ ರೈಲು ವಿಶಾಖಪಟ್ಟಣಂನಿಂದ ರಾಯಗಡಕ್ಕೆ ಹೋಗುತ್ತಿತ್ತು. ಓವರ್‌ಹೆಡ್ ಕೇಬಲ್‌ ಸಮಸ್ಯೆಯಾಗಿದ್ದರಿಂದ ರೈಲು ನಿಂತಿತ್ತು. ಈ ವೇಳೆ ಪಲಾಸ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ

ಅಪಘಾತದಲ್ಲಿ ಮೃತಪಟ್ಟವರಿಗೆ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ. ಶೀಘ್ರ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಮತ್ತು ಗಾಯಾಳುಗಳಿಗೆ ತ್ವರಿತ ವೈದ್ಯಕೀಯ ಸೇವೆಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸಿಎಂ ಆದೇಶಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

ಸಮೀಪದ ಜಿಲ್ಲೆಗಳಾದ ವಿಶಾಖಪಟ್ಟಣ ಮತ್ತು ಅನಕಾಪಲ್ಲಿಯಿಂದ ಸಾಧ್ಯವಾದಷ್ಟು ಅಂಬುಲೆನ್ಸ್‌ಗಳನ್ನು ಕಳುಹಿಸಲು ಮತ್ತು ಹತ್ತಿರದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದ ವಿವರಗಳನ್ನು ಕಾಲಕಾಲಕ್ಕೆ ಸಿಎಂಗೆ ವರದಿ ಮಾಡಬೇಕು ಎಂದು ಸೂಚಿಸಲಾಗಿದೆ.

- Advertisement -

Related news

error: Content is protected !!