Sunday, June 21, 2026
spot_imgspot_img
spot_imgspot_img

ವಿಟ್ಲ: (ಆ.1 ) ಲಯನ್ಸ್ ಕ್ಲಬ್ ವಿಟ್ಲ ಸಿಟಿ ಆನಂದಾಶ್ರಮ ಸೇವಾ ಟ್ರಸ್ಟ್ (ರಿ.) ಪುತ್ತೂರು, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ದ.ಕ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ, ಮಂಗಳೂರು, ವಿಟ್ಲ ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘ(ನಿ.) ಕೊಡಂಗಾಯಿ ಇದರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ

- Advertisement -
- Advertisement -

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಆನಂದಾಶ್ರಮ ಸೇವಾ ಟ್ರಸ್ಟ್ (ರಿ.) ಪುತ್ತೂರು, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ದ.ಕ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ, ಮಂಗಳೂರು, ವಿಟ್ಲ ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘ(ನಿ.) ಕೊಡಂಗಾಯಿ ಇದರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರವು ಆ.1 ರಂದು ಬೆಳಿಗ್ಗೆ ಗಂಟೆ 9.30ರಿಂದ ಮಧ್ಯಾಹ್ನ 1 ರ ತನಕ ವಿಟ್ಲಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನ, ಕೊಡಂಗಾಯಿಯಲ್ಲಿ ನಡೆಯಲಿದೆ.

ಸಭಾ ಕಾರ್ಯಕ್ರಮದಲ್ಲಿ ವಿಟ್ಲಪಡ್ನೂರು ವ್ಯ.ಸೇ.ಸ.ಸಂಘ(ನಿ.) ಕೊಡಂಗಾಯಿ ಇದರ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷ ಲ|ಜಯರಾಮ ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ.

ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ, ಲಯನ್ಸ್ ಜಿಲ್ಲೆ 317D ಲ|ಸುದರ್ಶನ ಪಡಿಯಾರ್ ವಿಟ್ಲ, ಲ|ಸತೀಶ್ ಕುಮಾರ್ ಆಳ್ವ ಉದ್ಯಮಿ, ವಿಟ್ಲ, ವಿಟ್ಲಪಡ್ನೂರು ವ್ಯ.ಸೇ.ಸ.ಸಂಘ(ನಿ.) ಕೊಡಂಗಾಯಿ ಇದರ ಉಪಾಧ್ಯಕ್ಷ ಬಾಲಕೃಷ್ಣ ರೈ ಮೂರ್ಜೆಬೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಟ್ಲಪಡ್ನೂರು ವ್ಯ.ಸೇ.ಸ.ಸಂಘ(ನಿ.) ಕೊಡಂಗಾಯಿ ಇಲ್ಲಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಶ ರೈ ಎರ್ಮೆನಿಲೆ ರವರನ್ನು ಸನ್ಮಾನಿಸಲಾಗುವುದು ಎಂದು ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷ ಲ|ಜಯರಾಮ ಬಲ್ಲಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!