Saturday, May 4, 2024
spot_imgspot_img
spot_imgspot_img

ಫೇಸ್​ಬುಕ್, ಇನ್ಸ್ಟಾಗ್ರಾಮ್ ಏಕಾಏಕಿ ಲಾಗೌಟ್

- Advertisement -G L Acharya panikkar
- Advertisement -

ಜನಪ್ರಿಯ ಜಾಲತಾಣಗಳಾದ ಫೇಸ್​ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು, ಜಗತಿನಾದ್ಯಂತ ಏಕಾಏಕಿ ಖಾತೆಗಳು ಲಾಗೌಟ್ ಆಗಿವೆ. ಹೌದು..ಇಂದು (ಮಾರ್ಚ್ 05) ರಾತ್ರಿ 9ರ ಸುಮಾರಿಗೆ ಏಕಾಏಕಿ ಫೇಸ್​ಬುಕ್​ ಹಾಗೂ ಇನ್ಸ್ಟಾಗ್ರಾಮ್ ಏಕಾಏಕಿ ತನ್ನಷ್ಟಕ್ಕೆ ತಾನೇ ಲಾಗೌಟ್ ಆಗಿವೆ. ​ಇದರಿಂದ ಬಳಕೆದಾರರು ಕಂಗಲಾಗಿದ್ದಾರೆ. ಇನ್ನು ಫೇಸ್ಬುಕ್​ ಪಾಸ್​ವರ್ಡ್​ ಮರೆತವರು ಪುನಃ ಲಾಗಿನ್ ಆಗುವುದಕ್ಕೆ ಪರದಾಡುವಂತಾಗಿದೆ.

ಮೊಬೈಲ್‌ ಹಾಗೂ ಕಂಪ್ಯೂಟರ್‌ನಲ್ಲಿ ಎರಡೂ ಖಾತೆಗಳು ಲಾಗ್‌ಔಟ್‌ ಆಗಿದ್ದು, ಮತ್ತೆ ಲಾಗ್‌ಇನ್‌ ಆಗುತ್ತಿಲ್ಲ.ಏಕಾಏಕಿ ಖಾತೆಗಳು ಲಾಗೌಟ್ ಆಗಿರುವುದು ಏಕೆ? ಎನ್ನುವುದು ಬಳಕೆದಾರರ ಪ್ರಶ್ನೆಯಾಗಿದೆ. ತನ್ನಷ್ಟಕ್ಕೆ ತಾನೇ ಲಗೌಟ್ ಆಗಿದ್ದರಿಂದ ಪಾಸ್​ವರ್ಡ್​ ಮರೆತವರು ಮತ್ತು ಬೇರೆಯವರ ಕಡೆಯಿಂದ ಫೇಸ್ಬುಕ್ ಖಾತೆ ಸೃಷ್ಟಿಸಿಕೊಂಡವರಿಗೆ ಮತ್ತೆ ಲಾಗಿನ್ ಆಗುವುದು ಹೇಗೆ ಎನ್ನುವ ಚಿಂತೆ ಕಾಡತೊಡಗಿದೆ. ಇದರಿಂದಾಗಿ ಸಾವಿರಾರು ಜನ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಯಾಕೆ ಈ ಸಮಸ್ಯೆ ಉಂಟಾಗಿದೆ ಎಂಬುದರ ಕುರಿತು ಫೇಸ್‌ಬುಕ್‌ ಅಥವಾ ಇನ್‌ಸ್ಟಾಗ್ರಾಂ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ

- Advertisement -

Related news

error: Content is protected !!