Saturday, April 27, 2024
spot_imgspot_img
spot_imgspot_img

ಪುತ್ರಿಯನ್ನು ರಕ್ಷಿಸಲು ಹೋದ ತಂದೆ-ತಾಯಿ ಸೇರಿ ಒಂದೇ ಕುಟುಂಬದ ಮೂವರು ನೀರುಪಾಲು

- Advertisement -G L Acharya panikkar
- Advertisement -

ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರು ನೀರುಪಾಲಾದ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ನಡದಿದೆ.

ಘಟನೆಯಲ್ಲಿ ಮಹಮ್ಮದ್ ಕಪೀಲ್ (42), ಶಾವರ ಭಾನು (35), ಶಾಹೀರಾ ಭಾನು (20)ಮೃತಪಟ್ಟಿದ್ದಾರೆ. ಅಜ್ಜಿಯ ತಿಥಿ ಕಾರ್ಯ ಮುಗಿಸಿ ನುಗು ಜಲಾಶಯದ ಬಲದಂಡೆ ನಾಲೆಯಲ್ಲಿ ಕೈ ಕಾಲು ತೊಳೆಯಲು ಹೋದಾಗ ಪುತ್ರಿ ಶಾಹೀರಾ ಭಾನು ಮೊದಲಿಗೆ ಕಾಲು ಜಾರಿ ಬಿದಿದ್ದು, ರಕ್ಷಣೆಗೆ ಹೋದ ಅಪ್ಪ, ಅಮ್ಮ ಹಾಗೂ ಪುತ್ರಿ ಮೂವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ಮೂವರ ಮೃತ ದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ಸರಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!